ಕಟಿಹಾರ್, ಮಾ.07 (DaijiworldNews/HR): ಬಾಗಲ್ಪುರ್ ಜಿಲ್ಲೆಯ ಗೋಪಾಲ್ಪುರ್ ಬಳಿ ಪೊಲೀಸರ ಅಮಾನವೀಯ ವರ್ತನೆಯಿಂದಾಗಿ ನೀರಿನಲ್ಲಿ ಮುಳುಗಿ ಪ್ರಾಣಬಿಟ್ಟ ತನ್ನ ಪುತ್ರನ ಶವವನ್ನು ತಂದೆಯೋರ್ವರು ಗೋಣಿ ಚೀಲದಲ್ಲಿ ಹಾಕಿಕೊಂಡು ಮೂರು ಕಿ.ಮೀ ನಡೆದ ಘಟನೆ ನಡೆದಿದೆ.
ನೀರೂ ಯಾದವ್ ಹಾಗೂ ಪುತ್ರ ಹರಿಓಂ ಯಾದವ್ ನದಿ ದಾಡುತ್ತಿದ್ದಾಗ, ಪುತ್ರ ಹರಿಓಂ ಯಾದವ್ ಕಾಲುಜಾರಿ ಬಿದ್ದು ನಾಪತ್ತೆಯಾಗಿದ್ದು, ಎರಡು ದಿನಗಳ ಕಾಲ ಹುಡುಕಿದರೂ ಮಗ ಸಿಗದೇ ಇದ್ದಾಗ ನೀರೂ ಯಾದವ್ ಪೊಲೀಸರಿಗೆ ದೂರು ನೀಡಿದ್ದರೂ ಕೂಡ ಹರಿಓಂ ಯಾದವ್ನನ್ನು ಹುಡುಕುವ ಯಾವುದೇ ಪ್ರಯತ್ನವನ್ನು ಪೊಲೀಸರು ಮಾಡಲಿಲ್ಲ ಎನ್ನಲಾಗಿದೆ.
ಇನ್ನು ಕೊನೆಗೆ ಹರಿಓಂ ಯಾದವ್ ಮೃತದೇಹ ಪಕ್ಕದ ಗ್ರಾಮದ ನದಿ ದಂಡೆ ಬಳಿ ಸಿಕ್ಕಿದ್ದು, ಶವವನ್ನು ಸಾಗಿಸಲೂ ಪೊಲೀಸರು ಯಾವುದೇ ವಾಹನ ವ್ಯವಸ್ಥೆ ಮಾಡದೇ ಅಮಾನವೀಯತೆ ಮೆರೆದಿದ್ದು, ಹರಿಓಂ ಯಾದವ್ನ ಶವವನ್ನು ಗೋಣಿ ಚೀಲದಲ್ಲಿ ಹಾಕಿಕೊಂಡು, ತಂದೆ ನೀರೂ ಯಾದವ್ ಮೂರು ಕಿ.ಮೀ ನಡೆದುಕೊಂಡೇ ತನ್ನ ಗ್ರಾಮವನ್ನು ತಲುಪಿದ್ದಾರೆ ಎಂದು ವರದಿಯಾಗಿದೆ.
ಪೊಲೀಸರ ಈ ಅಮಾನವೀಯ ವರ್ತನೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿದಿ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.