ಹೂಗ್ಲಿ, ಮಾ.07 (DaijiworldNews/MB): ಸದ್ಯ ಚುನಾವಣೆ ಘೋಷಣೆಯಾಗಿರುವ ಪಶ್ಚಿಮ ಬಂಗಾಳದಲ್ಲಿ ಸಚಿವರು ಮತಯಾಚಿಸುವ ವೇಳೆ ಜನರಿಗೆ ಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ. ಪಶ್ಚಿಮ ಬಂಗಾಳದ ಸಚಿವ ತಪನ್ ದಾಸ್ ಗುಪ್ತ, ''ನೀವು ನನಗೆ ಮತ ಹಾಕಿದಿದ್ದರೆ, ನಿಮಗೆ ನೀರು, ವಿದ್ಯುತ್ ನೀಡದಂತೆ ಮಾಡುತ್ತೇನೆ'' ಎಂದು ಬೆದರಿಕೆ ಹಾಕಿದ್ದಾರೆ.
ಎರಡು ಬಾರಿ ಶಾಸಕರಾಗಿದ್ದ ತಪನ್ ದಾಸ್ ಈಗ ಮತ್ತೆ ಸಪ್ತಗ್ರಾಮ ವಿಧಾನಸಭಾ ಕ್ಷೇತ್ರದ ಟಿಎಂಸಿ ಅಭ್ಯರ್ಥಿಯಾಗಿದ್ದು ಹೂಗ್ಲಿಯಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಈ ಹೇಳಿಕೆ ನೀಡಿದ್ದಾರೆ. ''ಯಾವ ಪ್ರದೇಶದಲ್ಲಿ ನನಗೆ ಮತ ಹಾಕುವುದಿಲ್ಲವೋ ಆ ಪ್ರದೇಶದ ಜನರಿಗೆ ನೀರು ಮತ್ತು ವಿದ್ಯುತ್ ಸಿಗಲ್ಲ'' ಎಂದು ಹೇಳಿದ್ದಾರೆ.
''ಮತ ಹಾಕದವರಿಗೆ ನಾನು ನೀರು, ವಿದ್ಯುತ್ ನೀಡಲ್ಲ. ನೀರು, ವಿದ್ಯುತ್ ಬೇಕಾದರೆ ಬಿಜೆಪಿಯನ್ನು ಅವರು ಕೇಳಲಿ'' ಎಂದು ಕೂಡಾ ಹೇಳಿದ್ದಾರೆ.