ಹಾವೇರಿ, ಮಾ.06 (DaijiworldNews/MB): ''ರಮೇಶ ಜಾರಕಿಹೊಳಿ ಪ್ರಕರಣದ ಬಳಿಕ ಹಲವು ಸಂಶಯಗಳು ಮೂಡಿದೆ. ಇದು ಹನಿಟ್ರ್ಯಾಪ್ ಆಗಿರಬಹುದೇ ಅಥವಾ ಷಡ್ಯಂತ್ರವೇ ಎಂಬ ವಿಚಾರಗಳು ಇವೆ'' ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ''ಸಚಿವರು, ಶಾಸಕರು ತೇಜೋವಧೆ ಆಗುವ ಸಾಧ್ಯತೆಗಳು ಅಧಿಕವಾಗಿದೆ. ಅದಕ್ಕಾಗಿ ಆರು ಜನ ಸಚಿವರು ಕೂಡಾ ಕೋರ್ಟ್ಗೆ ಮನವಿ ಸಲ್ಲಿಸಿದ್ದಾರೆ. ವೈಯಕ್ತಿಕ ಜೀವನದಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ರಾಜಕೀಯ ಮಾಡುವುದನ್ನು ತಪ್ಪಿಸಲು ನ್ಯಾಯಾಂಗದ ರಕ್ಷಣೆ ಕೋರಿದ್ದಾರೆ'' ಎಂದರು.
''ರಮೇಶ್ ಜಾರಕಿಹೊಳಿ ಅವರ ವಿರುದ್ದ ದೂರು ಬಂದಿದ್ದು ಅದರ ಆಧಾರದಲ್ಲಿ ತನಿಖೆ ನಡೆಯುತ್ತಿದೆ. ಮಹಿಳೆಯೇ ಬಂದು ಮಾಹಿತಿ ನೀಡಬೇಕಿತ್ತು. ಆದರೆ ಈವರೆಗೂ ಮಾಹಿತಿ, ದೂರು ನೀಡಿಲ್ಲ. ದೂರು ಕೊಟ್ಟವರೇ ಬೇರೆಯವರು. ಹೀಗಿರುವಾಗ ಇದು ರಾಜಕೀಯ ಷಡ್ಯಂತ್ರ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಈ ನಿಟ್ಟಿನಲ್ಲಿ ಕೆಲವರು ಕಾನೂನು ರಕ್ಷಣೆ ಕೋರಿದ್ದಾರೆ'' ಎಂದು ಹೇಳುವ ಮೂಲಕ ಹೈಕೋರ್ಟ್ ಮೊರೆ ಹೋದ ಆರು ಜನ ಸಚಿವರ ಪರ ನಿಂತರು.