ಬೆಂಗಳೂರು, ಮಾ.06 (DaijiworldNews/MB): ''ಹೆಣ ಬಿದ್ದರೆ ಹದ್ದಿನಂತೆ ಹಾರಿ ಬರುವ ಬಿಜೆಪಿಯ ಮಹಿಳಾ ನಾಯಕಿ ಈಗ ನಾಪತ್ತೆ'' ಎಂದು ಕಾಂಗ್ರೆಸ್, ರಮೇಶ್ ಜಾರಕಿಹೊಳಿ ರಾಸಲೀಲೆ ವಿಚಾರದಲ್ಲಿ ಚಕಾರ ಎತ್ತದ ಸಂಸದೆ ಶೋಭಾ ಕರಂದ್ಲಾಜೆ ಅವರ ಕಾಲೆಳೆದಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ''ಬಿಜೆಪಿ ಪಕ್ಷದವರು ಉದ್ಯೋಗ ಕೇಳಿಕೊಂಡು ಬರುವ ಹೆಣ್ಣು ಮಕ್ಕಳ ದಿಕ್ಕು ತಪ್ಪಿಸಿ ತೃಷೆಗೆ ಬಳಸಿಕೊಳ್ಳುತ್ತಿರುವುದು ರಾಜ್ಯ ಖಂಡಿಸುತ್ತಿದೆ. ಹೆಣ ಬಿದ್ದರೆ ಹದ್ದಿನಂತೆ ಹಾರಿ ಬರುವ ಬಿಜೆಪಿಯ ಮಹಿಳಾ ನಾಯಕಿ ಶೋಭಾ ಅವರು ಈಗ ನಾಪತ್ತೆ'' ಎಂದು ಹೇಳಿದೆ.
''ಎಲ್ಲದಕ್ಕೂ ಜಿಹಾದ್ ಪಟ್ಟ ಕಟ್ಟುವ ಶೋಭಾ ಅವರೇ ನಿಮ್ಮವರದ್ದು ಯಾವ ಜಿಹಾದ್? ಸಿಡಿ ಜಿಹಾದಾ?'' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.