ಬೆಂಗಳೂರು, ಮಾ.06 (DaijiworldNews/HR): ಶಾಸಕ ರಮೇಶ್ ಜಾರಕಿಹೊಳಿಯ ರಾಸಲೀಲೆಯ ಸಿಡಿ ಪ್ರಕರಣ ಬಯಲಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬಗ್ಗೆ ಯಾವುದೇ ಮಾನಹಾನಿಕಾರಕ ವರದಿ ಪ್ರಸಾರ ಮಾಡದಂತೆ ನಿರ್ಬಂಧ ಕೋರಿ ನ್ಯಾಯಾಲಯದ ಮೊರೆ ಹೋಗುವ ಶಾಸಕರ ಲಿಸ್ಟ್ ಕ್ಷಣ ಕ್ಷಣವು ಏರುತ್ತಿದೆ.
ಜಾರಕಿಹೊಳಿಯ ರಾಸಲೀಲೆಯ ಸಿಡಿ ಬಯಲಾಗುತ್ತಿದ್ದಂತೆ, ಸಚಿವ ಡಾ. ಕೆ. ಸುಧಾಕರ್, ಬಿ ಸಿ ಪಾಟೀಲ್, ಶಿವರಾಜ್ ಹೆಬ್ಬಾರ್, ಡಾ. ಕೆ ಸಿ ನಾರಾಯಣಗೌಡ, ಎಸ್ ಟಿ ಸೋಮಶೇಖರ್, ಭೈರತಿ ಬಸವರಾಜ್ ಅವರು ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯ ಮೆಟ್ಟಿಲು ಈಗಾಗಲೇ ಏರಿದ್ದು, ಇದೀಗ ಮತ್ತೆ ಕೆಲವು ಶಾಸಕರು ನ್ಯಾಯಾಲಯದ ಮೊರೆ ಹೋಗಿದ್ದಾರೆ ಎನ್ನಲಾಗಿದೆ.
ಇದೀಗ ಕೆ ಗೋಪಾಲಯ್ಯ,ಆರ್ ಶಂಕರ್, ಎಂಟಿಬಿ ನಾಗರಾಜ್, ಮಹೇಶ್ ಕುಮುಟಳ್ಳಿ, ಹೆಚ್ ನಾಗೇಶ್, ಪ್ರತಾಪ್ ಗೌಡ ಪಾಟೀಲ್, ಎಚ್ ವಿಶ್ವನಾಥ್ ಕೂಡ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬಗ್ಗೆ ಯಾವುದೇ ಮಾನಹಾನಿಕಾರಕ ವರದಿ ಪ್ರಸಾರ ಮಾಡದಂತೆ ನಿರ್ಬಂಧ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದು ಸಾರ್ವಜನಿಕರ ಅಚ್ಚರಿಗೆ ಹಾಗೂ ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು.