ಬೆಂಗಳೂರು, ಮಾ.06 (DaijiworldNews/HR): ಕೊರೊನಾದಿಂದಾಗಿ ಪಾಠ ಇಲ್ಲದ ಕಾರಣ ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ಮಕ್ಕಳಿಗೆ ಶಿಕ್ಷಣ ಇಲಾಖೆಯು ಸಿಹಿ ಸುದ್ದಿ ನೀಡಿದೆ.
ಸಾಂಧರ್ಭಿಕ ಚಿತ್ರ
ಈಗಾಗಲೇ ಪಠ್ಯದಲ್ಲಿ ಶೇ. 30 ರಷ್ಟು ಕಡಿತಗೊಳಿಸಿದ್ದ ಶಿಕ್ಷಣ ಇಲಾಖೆ, ಜೂನ್ನಲ್ಲಿ ಮುಖ್ಯ ಪರೀಕ್ಷೆ ನಡೆಸುವ ವೇಳಾಪಟ್ಟಿ ಕೂಡ ಪ್ರಕಟಿಸಿದ್ದು, ಇದೀಗ ಮತ್ತೊಂದು ಗುಡ್ ನ್ಯೂಸ್ ನೀಡಿದೆ ಎನ್ನಲಾಗಿದೆ.
ಬಹು ಆಯ್ಕೆ ಪ್ರಶ್ನೆಗಳನ್ನು 30ಕ್ಕೆ ಏರಿಸಿದ್ದು, ಪ್ರತಿಭಾರಿಯೂ ಕೇವಲ 20 ಅಂಕಕ್ಕೆ ಬಹು ಆಯ್ಕೆ ಪ್ರಶ್ನೆಗಳು ಇರುತ್ತಿದ್ದವು. ಈ ಬಾರಿ ಹತ್ತು ಅಂಕಕ್ಕೆ ಹೆಚ್ಚುವರಿ ಬಹು ಆಯ್ಕೆ ಪ್ರಶ್ನೆಗಳನ್ನು ನೀಡಲಾಗಿದೆ. ಈ ಮೂಲಕ ಸುಲಭವಾಗಿ ವಿದ್ಯಾರ್ಥಿಗಳು ಪಾಸಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಅವಕಾಶ ಮಾಡಿಕೊಟ್ಟಿದೆ.
ಇನ್ನು ಒಟ್ಟು ಒಂದು ವಿಷಯಕ್ಕೆ ನೂರು ಅಂಕವಿದ್ದು 20 ಅಂಕ ಶಾಲೆ ನೀಡರುವ ಇಂಟರಲ್ ಮಾರ್ಕ್ಸ್, ಉಳಿದ 80 ಅಂಕಕ್ಕೆ ಪ್ರಶ್ನೆ ಪತ್ರಿಕೆ ಇರಲಿದ್ದು, ಅದರಲ್ಲಿ ಈ ಬಾರಿ 30 ಅಂಕ ಬಹು ಆಯ್ಕೆ ಪ್ರಶ್ನೆಗಳಿರಲಿವೆ. ಉಳಿದ 50 ಅಂಕಗಳಿಗೆ ಅಷ್ಟೇ ವಿದ್ಯಾರ್ಥಿಗಳು ಉತ್ತರ ಬರೆಯಬೇಕಾಗಿದೆ ಎಂದು ತಿಳಿದು ಬಂದಿದೆ.