ಪ್ರಯಾಗ್ರಾಜ್, ಮಾ.06 (DaijiworldNews/HR): ಶಸ್ತ್ರಚಿಕಿತ್ಸೆಯ ಹಣ ಬಾಕಿ ಉಳಿಸಿದಕ್ಕೆ ಹೊಟ್ಟೆಯ ಭಾಗವನ್ನು ಹೊಲಿಯದೇ ಉತ್ತರ ಪ್ರದೇಶದ ಪ್ರಯಾಗ್ರಾಜ್ನ ಆಸ್ಪತ್ರೆಯೊಂದು ಮಗುವಿನ ಸಾವಿಗೆ ಕಾರಣವಾದ ಘಟನೆ ನಡೆದಿದೆ.
ಮಂಜಹನ್ಪುರದ ಕೌಶಂಬಿಯ ನಿವಾಸಿಯೊಬ್ಬ ಮೂರು ವರ್ಷದ ಮಗಳಿಗೆ ಕಿಬ್ಬೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿದ್ದು, ಮಗಳ ಚಿಕಿತ್ಸೆಗಾಗಿ ಪ್ರಯಾಗ್ರಾಜ್ನಲ್ಲಿರುವ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡುವಂತೆ ಹೇಳಿ ಹಣ ಕಟ್ಟುವಂತೆಯೂ ವೈದ್ಯರು ತಿಳಿಸಿದ್ದಾರೆ. ಆತ ಬಡವನಾಗಿರುವುದರಿಂದ ಸ್ವಲ್ಪ ಹಣವನ್ನು ಮೊದಲು ಕಟ್ಟಿದ್ದಾರೆ. ಅವರು ಹೇಳಿದಷ್ಟು ಸಂಪೂರ್ಣ ಹಣ ಕಟ್ಟಲು ಅವರಿಂದ ಸಾಧ್ಯವಾಗಿಲ್ಲ. ಇದು ಆಸ್ಪತ್ರೆ ಮಂಡಳಿಗೆ ತಿಳಿದಿದು ಬಾಕಿ ಉಳಿದಿರುವ ಹಣ ಕಟ್ಟದ ಹಿನ್ನೆಲೆ ಕೂಡಲೇ ಶಸ್ತ್ರಚಿಕಿತ್ಸೆ ಅರ್ಧಕ್ಕೆ ನಿಲ್ಲಿಸಿ. ಶಸ್ತ್ರ ಚಿಕಿತ್ಸೆ ನಡೆಸಿದ ಮಗುವಿನ ಭಾಗವನ್ನು ಸರಿಯಾಗಿ ಹೊಲಿಯದೆ ಹಾಗೇ ಕಳುಹಿಸಿ ಕೊಟ್ಟಿದ್ದಾರೆ ಎನ್ನಲಾಗಿದೆ.
ಇನ್ನು ಮಗು ಹೊಟ್ಟೆ ನೋವಿನಿಂದ ನರಳಿ ನರಳಿ ಸತ್ತಿದ್ದು, ಸದ್ಯ ಈ ಅಮಾನವೀಯ ಘಟನೆ ಟ್ವೀಟ್ಟರ್ ಮೂಲಕ ಬೆಳಕಿಗೆ ಬಂದಿದ್ದು, ಟ್ವಿಟ್ಟರ್ ಬಳಕೆದಾರರೊಬ್ಬರು ಈ ಘಟನೆ ಸಂಪೂರ್ಣ ಮಾಹಿತಿಯನ್ನು ಶೇರ್ ಮಾಡಿಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪ್ರಯಾಗ್ರಾಜ್ ಜಿಲ್ಲಾಧಿಕಾರಿ ಭಾನು ಚಂದ್ರ ಗೋಸ್ವಾಮಿ, ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದ್ದಂತೆ ಈ ಸಂಬಂಧ ಕೌಶಂಬಿ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರನ್ನು ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ ಜಿಲ್ಲಾ ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ತನಿಖೆಗೆ ಸಮಿತಿ ರಚಿಸಲಾಗಿದ್ದು, ತಪ್ಪಿತಸ್ಥ ಆಸ್ಪತ್ರೆ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.