ಉತ್ತರಪ್ರದೇಶ, ಮಾ.06 (DaijiworldNews/HR): ಉತ್ತರಪ್ರದೇಶದ ಆಲಿಗಢದಲ್ಲಿ 13 ವರ್ಷದ ಬಾಲಕನ ಮೇಲೆ ಇಬ್ಬರು ಅಪ್ರಾಪ್ತ ವಯಸ್ಕರು ಲೈಂಗಿಕ ದೌರ್ಜನ್ಯವೆಸೆಗಿ ಬಳಿಕ ಸಂತ್ರಸ್ತ ಬಾಲಕನಿಗೆ 20 ರೂ. ಹಣ ನೀಡಿ ಘಟನೆಯ ಕುರಿತು ಯಾರಿಗೂ ತಿಳಿಸದಂತೆ ಬೆದರಿಕೆಯೊಡ್ಡಿದ್ದ ಘಟನೆ ನಡೆದಿದೆ.
ಸಾಂಧರ್ಭಿಕ ಚಿತ್ರ
ಸಂತ್ರಸ್ತ ಬಾಲಕನ ತಂದೆ ಆತನನ್ನು ಕೃಷಿಗೆ ಸಂಬಂಧಿಸಿದ ಉಪಕರಣಗಳನ್ನು ತರುವಂತೆ ಮಾರುಕಟ್ಟೆಗೆ ಕಳುಹಿಸಿದ್ದು, ಈ ವೇಳೆ ಇಬ್ಬರು ಬಾಲಕರು ಲೋಧ ಪ್ರದೇಶದ ಬಳಿ ಆತನಿಗೆ ಎದುರಾಗಿ ಸಮೀಪದ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಸಂತ್ರಸ್ತ ಬಾಲಕ ಮನೆಗೆ ತೆರಳಿ ಪೋಷಕರಿಗೆ ಮಾಹಿತಿ ನೀಡಿದ್ದಾನೆ.
ಈ ಕುರಿತು ಸಂತ್ರಸ್ತ ಬಾಲಕನ ತಂದೆ ಪೊಲೀಸ್ ಠಾಣೆಯೊಂದರಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿ ಬಾಲಕರು ತನಗೆ ಪರಿಚಿತರು ಎಂದು ತಿಳಿಸಿದ್ದಾರೆ.