ನವದೆಹಲಿ,ಮಾ 06 (DaijiworldNews/MS): ದೇಶದ ಹೆಸರಾಂತ ಹಣಕಾಸು ಸಂಸ್ಥೆ ಮುತ್ತೂಟ್ ಗ್ರೂಪ್ ಮಾಲೀಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಂ.ಜಿ ಜಾರ್ಜ್ ಮುತ್ತೂಟ್ (೬೮) ಅವರು ನವದೆಹಲಿಯಲ್ಲಿ ಮಾ.05 ರ ಶುಕ್ರವಾರ ವಿಧಿವಶರಾಗಿದ್ದಾರೆ.
ಇವರು ಮುತ್ತೂಟ್ ಫೈನಾನ್ಸ್ ಎಂಬ ಭಾರತದ ಅತಿದೊಡ್ಡ ಚಿನ್ನದ ಮೇಲೆ ಸಾಲ ನೀಡುವ ಬ್ಯಾಂಕೇತರ ಹಣಕಾಸು(ಎನ್ಬಿಎಫ್ಸಿ) ಕಂಪನಿಯನ್ನು ಬೆಳೆಸಿದ್ದರು. . ಇದರ ಪ್ರಧಾನ ಕಚೇರಿ ಕೊಚ್ಚಿಯಲ್ಲಿದ್ದು, ಎಂ.ಜಿ ಜಾರ್ಜ್ ಅವರು ತಮ್ಮ ಕುಟುಂಬದಿಂದ ಮುತ್ತೂಟ್ ಗ್ರೂಪ್ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಮೂರನೇ ತಲೆಮಾರಿನವರಾಗಿದ್ದಾರೆ.
ದೇಶದ ಅತಿದೊಡ್ಡ ಉದ್ಯಮಿಯಾಗಿದ್ದ ಇವರು ದೀರ್ಘಕಾಲದಿಂದ ದೆಹಲಿಯಲ್ಲಿ ನೆಲೆಸಿದ್ದು, ಚಿನ್ನದ ಸಾಲ, ರಿಯಲ್ ಎಸ್ಟೇಟ್ , ಆಸ್ಪತ್ರೆ, ಆತಿಥ್ಯ ಮತ್ತು ಶಿಕ್ಷಣ ಹೀಗೆ 20ಕ್ಕೂ ಹೆಚ್ಚು ವ್ಯವಹಾರಗಳನ್ನು ನಡೆಸುತ್ತಿದ್ದರು.
2011 ಮತ್ತು 2019 ರಲ್ಲಿ ಭಾರತದ 50 ನೇ ಅತಿ ದೊಡ್ಡ ಶ್ರೀಮಂತ ಎಂದು ಫೋರ್ಬ್ ಏಷಿಯಾ ಮ್ಯಾಗ್ಜಿನ್ನಲ್ಲಿ ಗುರುತಿಸಿಕೊಂಡಿದ್ದ ಇವರು , ಎಂ.ಜಿ ಜಾರ್ಜ್ ಮುತ್ತೂಟ್ ಗ್ರೂಪ್ ಅಷ್ಟೇ ಅಲ್ಲದೆ ,ಭಾರತೀಯ ಆರ್ಥೊಡಾಕ್ಸ್ ಚರ್ಚ್ನ ಟ್ರಸ್ಟಿಯಾಗಿದ್ದರು ಮತ್ತು ಎಫ್ಐಸಿಸಿಐ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು. ಜೊತೆಗೆ ಎಫ್ಐಸಿಸಿಐ ಕೇರಳ ರಾಜ್ಯ ಪರಿಷತ್ತಿನ ಅಧ್ಯಕ್ಷರೂ ಆಗಿದ್ದರು.