ನವದೆಹಲಿ, ಮಾ.06 (DaijiworldNews/HR): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಯನ್ನು ವಿರೋಧಿಸಿ ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಸ್ವೀಡನ್ನ ಅಂತರಾಷ್ಟ್ರೀಯ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ ನೀಡಿರುವ ಹೇಳಿಕೆಗಳು ಭಾರತ ಹಾಗೂ ಸ್ವೀಡನ್ ನಡುವಣ ದ್ವಿಪಕ್ಷೀಯ ಬಾಂಧವ್ಯಕ್ಕೆ ಧಕ್ಕೆಯನ್ನುಂಟುಮಾಡುವುದಿಲ್ಲಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಗ್ರೆಟಾ ಥನ್ಬರ್ಗ್
ಗ್ರೆಟಾ ಥನ್ಬರ್ನ್ ಅವರ ಹೇಳಿಕೆಯ ಕುರಿತಾಗಿ ಭಾರತ ಹಾಗೂ ಸ್ವೀಡನ್ ಪ್ರಧಾನಿ ಮಂತ್ರಿಗಳ ನಡುವಣ ಸಭೆಯಲ್ಲಿ ಚರ್ಚಿಸಲಾಯಿತೇ ಎಂಬ ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ (ಪಶ್ಚಿಮ) ವಿಕಾಸ್ ಸ್ವರೂಪ್, ಇಲ್ಲ "ಇದು ಭಾರತ-ಸ್ವೀಡನ್ ನಡುವಣ ದ್ವಿಪಕ್ಷೀಯ ಸಮಸ್ಯೆಯಲ್ಲ" ಎಂದು ಹೇಳಿದ್ದಾರೆ.
ಇನ್ನು ಫೆಬ್ರವರಿಯಲ್ಲಿ ರೈತರಿಗೆ ಬೆಂಬಲ ವ್ಯಕ್ತಪಡಿಸಿದ್ದ ಗ್ರೆಟಾ ಥನ್ಬರ್ನ್ ಈ ಸಂಬಂಧ ಟ್ವೀಟ್ಗಳನ್ನು ಮಾಡಿದ್ದು, ಅಲ್ಲದೆ ಅವರು ಹಂಚಿರುವ 'ಟೂಲ್ಕಿಟ್' ವಿವಾದಕ್ಕೀಡಾಗಿತ್ತು ಎನ್ನಲಾಗಿದೆ.