ಬೆಂಗಳೂರು, ಮಾ.06 (DaijiworldNews/HR): ಎನ್ಎಸ್ಎಲ್ ಎಂದೇ ಮನೆಮಾತಾಗಿರುವ ಖ್ಯಾತ ಕವಿ ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್ಟರು ಶನಿವಾರ ಬೆಳ್ಳಗ್ಗೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದಿ ಬಂದಿದೆ.
ಎನ್ಎಸ್ಎಲ್ ಅವರ ಪೂರ್ಣ ಹೆಸರು ನೈಲಾಡಿ ಶಿವರಾಮ ಲಕ್ಷ್ಮೀ ನಾರಾಯಣ ಭಟ್ಟರು.
1936ರ ನವೆಂಬರ್ 29ರಂದು ಶಿವಮೊಗ್ಗದಲ್ಲಿ ಜನಿಸಿದ್ದ ಅವರು ಕನ್ನಡ ಭಾವಗೀತೆಗಳ ಲೋಕದಲ್ಲಿ ಅಮೂಲ್ಯ ಸಾಧನೆ ಮಾಡಿದವರು.
ಇನ್ನು ಬೆಂಗಳೂರಿನಲ್ಲಿ ಕಾಲೇಜು ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದ ಲಕ್ಷ್ಮೀ ನಾರಾಯಣ ಅವರು ಬಳಿಕ ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿ, ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ ಎನ್ನಲಾಗಿದೆ.