ಜೈಪುರ, ಮಾ.05 (DaijiworldNews/PY): ಮಕ್ಕಳು ತಪ್ಪು ಮಾಡಿದ ವೇಳೆ ಮುಂದೆ ಈ ರೀತಿಯಾದ ತಪ್ಪು ಮಾಡಬಾರದೆಂದು ಪೋಷಕರು ಬುದ್ದಿ ಮಾತು ಹೇಳುವುದನ್ನು ನೋಡಿದ್ದೇವೆ. ಆದರೆ, ಜೈಪುರದಲ್ಲಿ ತಂದೆಯೋರ್ವ ತಾನು ನೋಡಿದ್ದ ವರನೊಂದಿಗೆ ವಿವಾಹವಾಗಿದ್ದ ತನ್ನ 19 ವರ್ಷದ ಮಗಳು ಪ್ರಿಯಕರನೊಂದಿಗೆ ಓಡಿ ಹೋದ ಕಾರಣ ಆಕೆಯನ್ನು ಕತ್ತುಹಿಸುಕಿ ಹತ್ಯೆ ಮಾಡಿದ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ರಾಜಸ್ಥಾನದ ದೌಸ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಶಂಕರ್ ಲಾಲ್ ಸೈನಿ (50) ಹತ್ಯೆ ಮಾಡಿದ ಆರೋಪಿ. ಹತ್ಯೆಯಾದ ಆರೋಪಿಯನ್ನು ಪಿಂಕಿ ಎಂದು ಗುರುತಿಸಲಾಗಿದೆ.
"ಮಗಳನ್ನು ಹತ್ಯೆ ಮಾಡಿದ ಈತ ತಾನು ಮಾಡಿದ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಆರೋಪಿಯ ವಿರುದ್ದ ಕೊಟ್ಟಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ" ಎಂದು ಹಿರಿಯ ಪೊಲೀಸ್ ಅಧಿಕಾರಿ ದೀಪಕ್ ಕುಮಾರ್ ಹೇಳಿದ್ದಾರೆ.
"ನಾನು ಫೆ.21ರಂದು ನಾನು ಓರ್ವ ಯುವಕನೊಂದಿಗೆ ಪುತ್ರಿಯ ವಿವಾಹ ಮಾಡಿದ್ದೆ. ಈ ವಿವಾಹ ಆಕೆಗೆ ಇಷ್ಟವಿರಲಿಲ್ಲ. ವಿವಾಹವಾದ ಮೂರು ದಿನಗಳ ಬಳಿಕ ಆಕೆ ತವರು ಮನೆಗೆ ಬಂದಿದ್ದಳು. ತಾನು ಪ್ರೀತಿಸುತ್ತಿದ್ದ ಹುಡುಗ ರೋಷನ್ನೊಂದಿಗೆ ಫೆ.21ರಂದು ಆಕೆ ಓಡಿ ಹೋಗಿದ್ದಳು" ಎಂದು ಸೈನಿ ಪೊಲೀಸರಿಗೆ ತಿಳಿಸಿದ್ದಾನೆ.
"ಪ್ರಿಯಕರನ ಜೊತೆ ಮಗಳು ಓಡಿ ಹೋದ ನಂತರ ಆಕೆಯ ತಂದೆ ಸೈನಿ ತನ್ನ ಪುತ್ರಿ ಕಾಣೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಪಿಂಕಿಯ ಮನೆಯವರು ಆಕೆಯ ಮೊಬೈಲ್ ನಂಬರ್ ಅನ್ನು ಟ್ರೇಸ್ ಮಾಡಿ, ಪಿಂಕಿಯನ್ನು ವಾಪಾಸ್ ಮನೆಗೆ ಕರೆದುಕೊಂಡು ಬಂದಿದ್ದರು. ಈ ಸಂದರ್ಭ ಕೋಪಗೊಂಡಿದ್ದ ಪಿಂಕಿಯ ತಂದೆ ಆಕತೆಯ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ" ಎಂದು ಪೊಲೀಸರು ಹೇಳಿದ್ದಾರೆ.