ಬೆಂಗಳೂರು, ಮಾ.05 (DaijiworldNews/HR): ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರು ರಮೇಶ್ ಜಾರಕಿಹೊಳಿಗೆ ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದೆ.
ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಅವರು, "ಇಬ್ಬರು ಒಪ್ಪಿರುವುದರಿಂದ ಅದು ಅತ್ಯಾಚಾರವಾಗಲ್ಲ. ರಮೇಶ್ ಜಾರಕಿಹೊಳಿ ಬಲಿಪಶು ಮಾಡಲು ಪ್ರಯತ್ನಿಸಲಾಗಿದೆ. ಷಡ್ಯಂತ್ರದಿಂದ ಈ ರೀತಿ ಮಾಡಲಾಗಿದೆ" ಎಂದರು.
ಇನ್ನು "ಈ ಷಡ್ಯಂತ್ರದ ಕರಿತು ಆದಷ್ಟು ಬೇಗ ತನಿಖೆಯಾಗಬೇಕು. ಆರೋಪ ಮಾಡಿರುವ ದಿನೇಶ್ ಕಲ್ಲಳ್ಳಿಯನ್ನು ಬಂಧಿಸಬೇಕು ಎಂದು ರೇಣುಕಾಚಾರ್ಯ ಒತ್ತಾಯ ಮಾಡಿದ್ದಾರೆ" ಎನ್ನಲಾಗಿದೆ.