ನವದೆಹಲಿ, ಮಾ 05 (DaijiworldNews/MS): ದೇಶದಾದ್ಯಂತ ಭಾರಿ ಸುದ್ದಿ ಮಾಡಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆಗೆ ಪ್ರಕರಣಕ್ಕೆ ತಳಕು ಹಾಕಿಕೊಂಡಿದ್ದ ಡ್ರಗ್ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ ಸಿಬಿ ಅಧಿಕಾರಿಗಳು ಇಂದು ಚಾರ್ಜ್ ಶೀಟ್ ಸಲ್ಲಿಕೆ ಮಾಡಲಿದ್ದಾರೆ.
ಸುಮಾರು 30 ಸಾವಿರ ಪುಟಗಳಷ್ಟಿರುವ ಚಾರ್ಜ್ ಶೀಟನ್ನು ಎನ್ ಸಿಬಿ ಮುಖ್ಯಸ್ಥ ಸಮೀರ್ ವಾಂಖೆಡೆ ಸ್ವತಃ ಸಲ್ಲಿಕೆ ಮಾಡಲಿದ್ದಾರೆ. ಡ್ರ ಗ್ಸ್ ಪ್ರಕರಣದಲ್ಲಿ ಒಂದು ತಿಂಗಳು ಜೈಲಿನಲ್ಲಿದ್ದ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಗೆಳತಿ ರಿಯಾ ಚಕ್ರವರ್ತಿ ಅವರನ್ನು ಎನ್ಸಿಬಿ ಚಾರ್ಜ್ಶೀಟ್ನಲ್ಲಿ ಹೆಸರಿಸಲಾಗಿದೆ.
ಚಾರ್ಜ್ ಶೀಟ್ ನಲ್ಲಿ ಎನ್ ಸಿಬಿಯು ಒಟ್ಟು 33 ಜನರ ಹೆಸರನ್ನು ಸೇರಿಸಲಾಗಿದೆ. ರಿಯಾ ಚಕ್ರವರ್ತಿಯ ಹೊರತಾಗಿ, ಎನ್ಸಿಬಿ ಹಲವಾರು ಡ್ರಗ್ ಪೆಡ್ಲರ್ಗಳು ಮತ್ತು ಇತರ ಆರೋಪಿಗಳನ್ನು ಚಾರ್ಜ್ಶೀಟ್ನಲ್ಲಿ ಹೆಸರಿಸಿದೆ. ಡ್ರಗ್ಸ್ ಪ್ರಕರಣದ ತನಿಖೆಯ ವೇಳೆ ಈ ಆರೋಪಿಗಳಲ್ಲಿ ಹೆಚ್ಚಿನವರನ್ನು ಎನ್ಸಿಬಿ ಬಂಧಿಸಿದೆ.
ಕಳೆದ ವರ್ಷದ ಜೂನ್ ನಲ್ಲಿ ನಟ ಸುಶಾಂತ್ ಸಿಂಗ್ ತಮ್ಮ ಬಾಂದ್ರಾ ನಿವಾಸದಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸಾವಿನ ಬಳಿಕ ಬಾಲಿವುಡ್ ನಲ್ಲಿ ಸ್ವಜನಪಕ್ಷಪಾತ ಮತ್ತು ಬಾಲಿವುಡ್ನ ಕಾರ್ಯವೈಖರಿಯ ಬಗ್ಗೆ ಭಾರಿ ಚರ್ಚೆಗೆ ಕಾರಣಗಿತ್ತು ಬಳಿಕ ಇದೇ ಪ್ರಕರಣಕ್ಕೆ ಡ್ರಗ್ ನಂಟು ಅಂಟಿಕೊಂಡಿತ್ತು.