ನವದೆಹಲಿ, ಮಾ.05 (DaijiworldNews/PY): "ಕೊರೊನಾ ಲಸಿಕೆಗಳನ್ನು ವಿದೇಶಗಳಿಗೆ ರಫ್ತು ಮಾಡುವ ಮುನ್ನ ನಮ್ಮ ದೇಶದ ನಾಗರಿಕರಿಗೆ ನೀಡಿ" ಎಂದು ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.
ವಕೀಲರಿಗೂ ಕೂಡಾ ಆದ್ಯತೆಯ ಮೇರೆ ಕೊರೊನಾ ಲಸಿಕೆ ವಿತರಣೆ ಮಾಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಮಾಡಿದ ದೆಹಲಿ ಹೈಕೋರ್ಟ್, "ನಾವು ಕೊರೊನಾ ಲಸಿಕೆಯನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ. ಬದಲಾಗಿ ವಿದೇಶಗಳಿಗೆ ದಾನ ಮಾಡುತ್ತಿದ್ದೇವೆ. ನಮ್ಮ ದೇಶದ ನಾಗರಿಕರಿಗೆ ಲಸಿಕೆ ನೀಡುತ್ತಿಲ್ಲ. ಆದ್ದರಿಂದ ಜವಾಬ್ದಾರಿ ಇರಬೇಕು" ಎಂದು ತಿಳಿಸಿದೆ.
"ಕೊರೊನಾ ಲಸಿಕೆಯ ವಿತರಣೆಯ ಸಂದರ್ಭ ನಿರ್ದಿಷ್ಟ ವಯೋಮಿತಿ ಹಾಗೂ ಕೆಲ ನಿಬಂಧನೆಗಳಿಗೆ ಒಳಪಟ್ಟವರಿಗೆ ಮಾತ್ರ ಕೊರೊನಾ ಲಸಿಕೆಯ ಉದ್ದೇಶ ಏಕೆ?" ಎಂದು ದೆಹಲಿ ಹೈಕೋರ್ಟ್ ಕೇಳಿದೆ.
ದಿನಕ್ಕೆ/ವಾರ/ತಿಂಗಳ ಆಧಾರದ ಮೇಲೆ ಲಸಿಕೆಗಳನ್ನು ತಯಾರಿಸುವ ಸಾಮರ್ಥ್ಯದ ಮೇಲೆ ಪ್ರತ್ಯೇಕ ಅಫಿಡವಿಟ್ಗಳನ್ನು ಸಲ್ಲಿಸುವಂತೆ ಹೈಕೋರ್ಟ್ ಪುಣೆಯ ಸೀರಂ ಇನ್ಸಿಟ್ಯೂಟ್ ಮತ್ತು ಹೈದರಬಾದ್ನ ಭಾರತ್ ಬಯೋಟೆಕ್ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದೆ.