ನವದೆಹಲಿ, ಮಾ.04 (DaijiworldNews/PY): ಲಸಿಕೆ ಮೈತ್ರಿ ಉಪಕ್ರಮದಡಿ ಗಾನಾ, ರುವಾಂಡ, ಸೆನೆಗಲ್, ಕಾಂಗೋ ಹಾಗೂ ಕೋತ್ ದ್’ಇವಾರ್ಗಳಿಗೆ ಮೇಡ್ ಇಂಡಿಯಾ ಕೊರೊನಾ ಲಸಿಕೆಗಳನ್ನು ಭಾರತ ಗುರುವಾರ ವಿಮಾನದ ಮೂಲಕ ಸಾಗಿಸಿದೆ.
ಈ ಬಗ್ಗೆ ಮಾಹಿತಿಯನ್ನು ವಿದೇಶಾಂಗ ಸಚಿಯವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಅವರು ತಮ್ಮ ಟ್ವಿಟ್ಟರ್ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ವ್ಯಾಕ್ಸಿನ್ನ ಮೈತ್ರಿ ಮುಂದುವರೆಯುತ್ತದೆ. ಮೇಡ್ ಇನ್ ಇಂಡಿಯಾ ಕೊರೊನಾ ಲಸಿಕೆಗಳು ಗಾನಾ, ರುವಾಂಡ, ಸೆನೆಗಲ್, ಕಾಂಗೋ ಹಾಗೂ ಕೋತ್ ದ್’ಇವಾರ್ಗಳಿಗೆ ವಿಮಾನದ ಮೂಲಕ ರವಾನಿಸಲಾಗಿದೆ" ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ, "ಕೊರೊನಾ ಸಾಂಕ್ರಾಮಿಕದ ನಡುವೆ ಭಾರತವು ತನ್ನ ಲಸಿಕೆ ಮೈತ್ರಿ ಉಪಕ್ರಮದಡಿ ದೇಶಗಳಿಗೆ ನೆರವಾಗುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದರಿಂದ ಪ್ರಧಾನಿ ಮೋದಿ ಅವರನ್ನು ಜಾಗತಿಕ ನಾಯಕರು ಶ್ಲಾಘಿಸುತ್ತಿದ್ದಾರೆ. ಲಸಿಕೆ ಮೈತ್ರಿ ಉಪಕ್ರಮದಡಿ ಭಾರತ ತನ್ನ ನೆರೆಯ ರಾಷ್ಟ್ರಗಳಿಗೆ ಕೊರೊನಾ ಲಸಿಕೆಗಳನ್ನು ನೀಡುತ್ತಿದೆ" ಎಂದಿದ್ದಾರೆ.