ತಿರುವನಂತಪುರಂ, ಮಾ.04 (DaijiworldNews/MB): ಮುಂಬರುವ ಕೇರಳ ವಿಧಾನಸಭಾ ಚುನಾವಣೆಗೆ ಬಿಜೆಪಿಯು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಗುರುವಾರ ಘೋಷಣೆ ಮಾಡಿದೆ.
'ಮೆಟ್ರೋ ಮ್ಯಾನ್' ಎಂದೂ ಕರೆಯಲ್ಪಡುವ ಇ.ಶ್ರೀಧರನ್ ಅವರು ತಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಗುರುವಾರ ಭಾರತೀಯ ಜನತಾ ಪಕ್ಷದ ಮುಖ್ಯಸ್ಥ ಸುರೇಂದ್ರನ್ ತಿಳಿಸಿದ್ದಾರೆ.
ಫೆಬ್ರವರಿಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿರುವ ಶ್ರೀಧರನ್ ಅವರು, ಕೇರಳದಲ್ಲಿ ಬಿಜೆಪಿ ಆಡಳಿತಕ್ಕೆ ತರಲು ತಾನು ಬದ್ದ ಎಂದು ಹೇಳಿದ್ದರು. ಹಾಗೆಯೇ ತಾನು ಮುಖ್ಯಮಂತ್ರಿ ಆಗುವ ಅಭಿಲಾಷೆಯನ್ನೂ ವ್ಯಕ್ತಪಡಿಸಿದ್ದರು.
ಈಗ ಬಿಜೆಪಿ ಹೈಕಮಾಂಡ್ 'ಮೆಟ್ರೋ ಮ್ಯಾನ್' ಇ.ಶ್ರೀಧರನ್ ಅವರನ್ನೇ ಕೇರಳ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ.