ರಾಮನಗರ, ಮಾ 04 (DaijiworldNews/MS): ಬಿಜೆಪಿ ಮುಖಂಡ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಹಿಳೆಯೊಬ್ಬರಿಗೆ ವಂಚಿಸಿದ್ದಾರೆ ಎಂಬ ಆರೋಪ ಹೊರಿಸಿರುವ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ, ಜೀವಭಯ ಕಾಡುತ್ತಿರುವ ಹಿನ್ನಲೆಯಲ್ಲಿ ಇಂದು ವಿಚಾರಣೆಗೆ ಬರುವುದಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ರಮೇಶ್ ಜಾರಕಿಹೊಳಿ ವಿರುದ್ದ ಸಿಡಿ ಬಿಡುಗಡೆ ಹಾಗೂ ಪೊಲೀಸರಿಗೆ ದೂರು ಸಲ್ಲಿಸಿದ ಬಳಿಕ ದೂರು ನೀಡಿದ ಬಳಿಕ ಬೆದರಿಕೆ ಕರೆಗಳು ಜಾಸ್ತಿಯಾಗುತ್ತಿದೆ ಹೀಗಾಗಿ ನನಗೆ ಭದ್ರತೆ ಇಲ್ಲದೇ ಇರುವ ಕಾರಣ ಇಂದು ವಿಚಾರಣೆಗೆ ಹಾಜರಾಗುವುದಿಲ್ಲ. ಎಂದು ಪತ್ರ ಮುಖೇನ ತಿಳಿಸಿದ್ದಾರೆ.
ಬೆದರಿಕೆ ಕರೆಗಳು ಬರುತ್ತಿರುವ ಬಗ್ಗೆ ರಾಮನಗರ ಎಸ್ಪಿ ಗಿರೀಶ್ಗೆ ದೂರು ಸಲ್ಲಿಸಿದ್ದು, ರಮೇಶ್ ಬೆಂಬಲಿಗರು ನನ್ನ ಮನೆಯ ಸುತ್ತ ಮುತ್ತ ಓಡಾಡುತ್ತಿದ್ದಾರೆ. ನನಗೆ ಜೀವಭಯವಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸರು ಈ ದೂರಿಗೆ ಸ್ಪಂದಿಸಿ ಅವರ ಕನಕಪುರದ ನಿವಾಸಕ್ಕೆ ಭದ್ರತೆ ನೀಡಿದ್ದಾರೆ. ದಿನೇಶ್ ಕಲ್ಲಹಳ್ಳಿ ಮಾರ್ಚ್ 9ರಂದು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.