ನವದೆಹಲಿ, ಮಾ 04 (DaijiworldNews/MS): ವಿಶ್ವದ ಅತ್ಯಂತ ಅಚ್ಚರಿಯ ಕಟ್ಟಡಳಗಳಲ್ಲೊಂದೆನಿಸಿದ ತಾಜ್ ಮಹಲ್ಗೆ ಬಾಂಬ್ ಬೆದರಿಕೆ ಕರೆ ಬಂದ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ ವಿಧಿಸಲಾಗಿದೆ. ಮಾತ್ರವಲ್ಲದೆ ತಕ್ಷಣಕ್ಕೆ ಪ್ರವಾಸಿಗರು ಅಲ್ಲಿಂದ ಹೊರಹೋಗುವಂತೆ ಪೊಲೀಸರು ಸೂಚಿಸಿರುವ ಘಟನೆ ನಡೆದಿದೆ.
ಆಗ್ರಾದ ಪೊಲೀಸ್ ಕಂಟ್ರೋಲ್ ರೂಮ್ಗೆ ಕರೆ ಮಾಡಿದ ಅನಾಮಿಕ ವ್ಯಕ್ತಿಯು, ಐತಿಹಾಸಿಕ ತಾಜ್ಮಹಲ್ ಕಟ್ಟಡದೊಳಗೆ ಬಾಂಬ್ ಇಟ್ಟಿರುವುದಾಗಿ ಹೇಳಿದ್ದಾನೆ. ಅಲ್ಲದೇ ಯಾವುದೇ ಕ್ಷಣದಲ್ಲಿ ಬಾಂಬ್ ಸ್ಫೋಟವಾಗಲಿದೆ ಎಂದೂ ಬೆದರಿಕೆ ಹಾಕಿದ್ದಾನೆ. ಕೂಡಲೇ ಎಚ್ಚೆತ್ತುಕೊಂಡ ಆಗ್ರಾ ಪೊಲೀಸರು, ಪ್ರವಾಸಿಗರನ್ನು ಹೊರಹೋಗುವಂತೆ ಸೂಚಿಸಿ, 3 ಗೇಟ್ಗಳು ಬಂದ್ ಮಾಡಿದ್ದಾರೆ. ಸ್ಥಳಕ್ಕೆ ಶ್ವಾನದಳ, ಬಾಂಬ್ ಪತ್ತೆ ದಳದ ತಂಡ ಆಗಮಿಸಿ ಶೋಧ ಕಾರ್ಯ ಚುರುಕುಗೊಳಿಸಿ ಕಟ್ಟಡವನ್ನು ಪೊಲೀಸ್ ಸುಪರ್ದಿಗೆ ತೆಗೆದುಕೊಂಡಿದ್ದಾರೆ.
ವಿಶ್ವ ಪ್ರಸ್ತಿದ್ದ ತಾಣ ತಾಜ್ ಮಹಲ್ ಕಟ್ಟಡವನ್ನು 17ನೇ ಶತಮಾನದಲ್ಲಿ ಕಟ್ಟಿಸಲಾಗಿದೆ. 1631ರಲ್ಲಿ ಅವರ ಹೆಂಡತಿ ಮುಮ್ತಾಜ್ ಸತ್ತಾ ಪ್ರೇಮದ ಕುರುಹಾಗಿ ತಾಜ್ ಮಹಲ್ ಕಟ್ಟಿಸಿದರೆನ್ನಲಾಗಿದೆ. ಇದರ ನಿರ್ಮಾಣಕ್ಕೆ ಬರೋಬ್ಬರಿ 20 ವರ್ಷ ತಗುಲಿತ್ತು. ಇಲ್ಲಿಯೇ ಮುಮ್ತಾಜ್ ಸಮಾಧಿ ಇದೆ. ಶಾಹಜಹಾನ್ ನಿಧನವಾದಾಗ ಅವರನ್ನೂ ಮುಮ್ತಾಜ್ ಪಕ್ಕದಲ್ಲೇ ಸಮಾಧಿ ಮಾಡಲಾಗಿದೆ.