ಬಾಗಲಕೋಟೆ, ಮಾ.04 (DaijiworldNews/PY): ಲಾರಿಗೆ ಮಿನಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮಿನಿ ಬಸ್ ಪಲ್ಟಿಯಾಗಿ ಇಬ್ಬರು ಸಜೀವ ದಹನವಾದ ಘಟನೆ ಬಾಗಲಕೋಟೆಯ ಉತ್ತೂರು ಬಳಿ ಮುಧೋಳ-ಯಾದವಾಡ ರಸ್ತೆಯಲ್ಲಿ ನಡೆದಿದೆ.
ಲಾರಿಗೆ ಮಿನಿ ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಬಸ್ ರಸ್ತೆ ಕೆಳಗಿನ ಹೊಲಕ್ಕೆ ತಿರುಗಿದೆ. ಈ ಸಂದರ್ಭ ಹೊಲದಲ್ಲಿ ಟಿಸಿ ಇದ್ದ ವಿದ್ಯುತ್ ಕಂಬಕ್ಕೆ ಬಸ್ ಗುದ್ದಿದೆ ಎನ್ನಲಾಗಿದೆ. ಈ ವೇಳೆ ಬಸ್ ಉರಿದು ಇಬ್ಬರು ಸಜೀವ ದಹನವಾಗಿದ್ದಾರೆ.
ಬಸ್ನಲ್ಲಿದ್ದ ಅನೇಕ ಮಂದಿ ಹೊರ ಬಂದಿರುವ ಕಾರಣ ಹಲವಾರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಫಟನೆಯ ಬಗ್ಗೆ ಮಾಹಿತಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಘಟನಾ ಸ್ಥಳಕ್ಕಾಗಮಿಸಿದ್ದಾರೆ.