ಶ್ರೀನಗರ, ಮಾ.04 (DaijiworldNews/HR): 19 ತಿಂಗಳ ಗೃಹಬಂಧನದಲ್ಲಿದ್ದ ಆಲ್ ಪಾರ್ಟೀಸ್ ಹುರಿಯನ್ ಕಾನ್ಫರೆನ್ಸ್ (ಎಪಿಎಚ್ಸಿ) ಅಧ್ಯಕ್ಷ ಮಿರ್ವೈಝ್ ಉಮರ್ ಫಾರೂಕ್ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
2019ರ ಆಗಸ್ಟ್ನಿಂದ ಫಾರೂಕ್ ಗೃಹಬಂಧನದಲ್ಲಿದ್ದರು ಎನ್ನಲಾಗಿದೆ.
"ಫಾರೂಕ್ ಅವರಿಗೆ ಶ್ರೀನಗರದ ಹಝ್ರತ್ಬಾಲ್ ಪ್ರದೇಶದ ನಿಗೀನ್ನಲ್ಲಿರುವ ತಮ್ಮ ಮನೆಯಿಂದ ಹೊರಗೆ ಓಡಾಡಲು ಅವಕಾಶ ನೀಡಲಾಗಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಇದಕ್ಕೆ ಪ್ರತಿಕ್ರಿಯಿಸಿದ ಫಾರೂಕ್ "ನಾನು ಸ್ವತಂತ್ರ್ಯ ವಕ್ತಿಯೆಂದು ತಿಳಿದು ಸಂತೋಷವಾಗುತ್ತಿದೆ" ಎಂದು ಹೇಳಿದ್ದಾರೆ.
ಫಾರೂಕ್ ಫಾರೂಕ್ ಅವರ ಬಿಡುಗಡೆ ಬಗ್ಗೆ ಅಧಿಕೃತ ಆದೇಶ ಇನ್ನೂ ಕೈಸೇರಿಲ್ಲ ಎಂದು ಹುರಿಯತ್ ವಕ್ತಾರ ಸ್ಪಷ್ಟಪಡಿಸಿದ್ದಾರೆ.