ಬೆಂಗಳೂರು,ಮಾ 04 (DaijiworldNews/MS): ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಶಾಸಕ ರಮೇಶ್ ಜಾರಕಿಹೊಳಿಯವರ ಅಶ್ಲೀಲ ಸಿಡಿ ಪ್ರಕರಣ ದಿನಕ್ಕೊಂದು ತಿರುವು ಪಡೆದಿದ್ದು, ಇದೀಗ ಈ ಅಶ್ಲೀಲ ವಿಡಿಯೋದ 10 ನಿಮಿಷದ ತುಣುಕು ಮಂಗಳವಾರ ಮಧ್ಯಾಹ್ನ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ ಲೋಡ್ ಆಗಿದೆ. ಈ ಯುಟ್ಯೂಬ್ ನ ಐಪಿ ವಿಳಾಸ ಪಚ್ಚೆಹಚ್ಚಿದಾಗ ಅದು ರಷ್ಯಾದಲ್ಲಿ ತೋರಿಸುತ್ತಿದೆ. ಆದರೆ ಯಾರು ಅಪ್ಲೋಡ್ ಮಾದಿದ್ದು ಎಂಬುವುದು ಪತ್ತೆಯಾಗಿಲ್ಲ.
ಇನ್ನೊಂದೆಡೆ ಪ್ರಕರಣದ ಪ್ರಮುಖ ಕೇಂದ್ರಬಿಂದು ವಿಡಿಯೊದಲ್ಲಿರುವ ನಿಗೂಢ ಯುವತಿ ಕಳೆದ ಹಲವು ತಿಂಗಳಿನಿಂದ ವಿಧಾನಸೌಧಕ್ಕೆ ಆಗ್ಗಾಗ್ಗೆ ಭೇಟಿ ನೀಡುತ್ತಿದ್ದು, ವಿಧಾನ ಸೌಧದಲ್ಲಿರುವ ರಮೇಶ್ ಜಾರಕಿಹೊಳಿ ಕಚೇರಿಗೆ ಆಗ್ಗಾಗೆ ಬಂದು ಹೋಗುತ್ತಿದ್ದಳು ಎಂದು ವಿಧಾನಸೌಧದ ಅಧಿಕಾರಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.
ವಿಧಾನ ಸೌಧದ ಸಿಬ್ಬಂದಿಗಳನ್ನು ಮಾತಿಗೆಳೆಯುತ್ತಿದ್ದ ಯುವತಿ, ರಾಜ್ಯದ ಜಲಾಶಯಗಳ ಬಗ್ಗೆ ಸಾಕ್ಷ್ಯಚಿತ್ರ ತಯಾರಿಸುತ್ತಿದ್ದು, ಡಾಕ್ಯುಮೆಂಟ್-ಫಿಲ್ಮ್ಗಳನ್ನು ಚಿತ್ರೀಕರಿಸಲು ಡ್ರೋನ್ ಅನುಮತಿ ಬೇಕಾಗಿದೆ. ಜಲಾಶಯ ಸಂರಕ್ಷಿತ ಸ್ಥಳವಾಗಿರುವುದರಿಂದ ಡ್ರೋನ್ ಬಳಸಲು ಅನುಮತಿ ಸಿಗದಿರುವುದರಿಂದ ಸಹಾಯಕ್ಕಾಗಿ ಹಾಗೂ ಉದ್ಯೋಗ ಬಯಸಿ ಸಚಿವರ ಬಳಿ ಬಂದಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದಳು.
ಉದ್ಯೋಗವನ್ನು ಬಯಸಿಬಂದ ಬಡ ಯುವತಿಯೊಬ್ಬಳು, ಸಾಕಷ್ಟು ಹಣ ವ್ಯಯಿಸಿ ಹಿಡನ್ ಕ್ಯಾಮರಾ ಬಳಸಿ ಉನ್ನತ ಮಟ್ಟದ ವಿಡಿಯೋ ಸೆರೆಹಿಡಿದು, ಅದನ್ನು ಎಡಿಟ್ ಮಾಡಿ, ರಷ್ಯಾದಲ್ಲಿ ಬಿಡುಗಡೆ ಮಾಡಲು ಸಾಧ್ಯವೇ? ಹೀಗಾಗಿ ಯುವತಿಗೆ ಶೋಷಣೆ ನೀಡಿದರು ಎಂಬ ಮಾತುಗಳು ಸುಳ್ಳು ಇವೆಲ್ಲವೂ ಪೂರ್ವನಿಯೋಜಿತ ಎನ್ನುತ್ತಾರೆ ಅಧಿಕಾರಿಗಳು ಹೇಳುತ್ತಿದ್ದಾರೆ.