ಕೋಯಿಕ್ಕೋಡ್, ಮಾ.04 (DaijiworldNews/PY): ಏರ್ ಇಂಡಿಯಾ ವಿಮಾನಗಳ ರದ್ದತಿ ಹಾಗೂ ವಿಮಾನ ಪ್ರಯಾಣ ದರಗಳ ಹೆಚ್ಚಳದ ವಿರುದ್ದ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಅಳಿಯ ಪಿ.ಎ.ಮೊಹಮ್ಮದ್ ರಿಯಾಝ್ಗೆ ಸ್ಥಳೀಯ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಮೊಹಮ್ಮದ್ ರಿಯಾಝ್ ಅವರೊಂದಿಗೆ ಸಹ ಆರೋಪಿಗಳಾದ ಟಿ.ವಿ.ರಾಜೇಶ್ ಹಾಗೂ ಕೆ.ಕೆ.ದಿನೇಶ್ ಅವರಿಗೂ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಕಣ್ಣೂರು ಜಿಲ್ಲೆಯಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ರಾಜೇಶ್, ಡಿವೈಎಫ್ಐ ಮುಖಂಡ ಕೆ.ಕೆ.ದಿನೇಶ್ ಹಾಗೂ ಮೊಹಮ್ಮದ್ ರಿಯಾಝ್ ಅವರು 2009ರಲ್ಲಿ ಏರ್ ಇಂಡಿಯಾ ವಿರುದ್ದ ಪ್ರತಿಭಟನೆ ನಡೆಸಿದ್ದು, ರಾಜೇಶ್ ಅವರು ಈ ಪ್ರತಿಭಟನೆಯನ್ನು ಪ್ರಾರಂಭಿಸಿದ್ದರು. ಈ ಬಗ್ಗೆ 2009ರಲ್ಲಿ ಪ್ರಕರಣ ದಾಖಲಾಗಿತ್ತು. ಇಷ್ಟು ದಿನಗಳ ತನಕ ಜಾಮೀನು ಪಡೆದಿದ್ದ ಆರೋಪಿಗಳು, ಜಾಮೀನು ಕಾಲಾವಧಿ ವಿಸ್ತರಣೆ ಕೋರಿ ಸಲ್ಲಿಸಿದ್ದ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ.