ಬೆಂಗಳೂರು, ಮಾ 04 (DaijiworldNews/MS): ರಾಜ್ಯದಲ್ಲಿ 1 ರಿಂದ 5 ತರಗತಿಗಳನ್ನು ಪೂರ್ಣವಾಗಿ ಪುನರಾರಂಭಿಸಲು ಅನುಮತಿ ಕೋರಿ ಸಾರ್ವಜನಿಕ ಶಿಕ್ಷಣ ಇಲಾಖೆಯೂ ಸರ್ಕಾರಕ್ಕೆ ಪತ್ರ ಬರೆದಿದೆ.
ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಕೆ 'ನಲಿಯುತಾ ಕಲಿಯೋಣ' ಕಾರ್ಯಕ್ರಮದಡಿ ರೇಡಿಯೋ ಪ್ರಸಾರವಾಗುವ ಪಾಠಗಳನ್ನು ಹೊರತುಪಡಿಸಿ ಈ ಮಕ್ಕಳಿಗೆ ಏನನ್ನೂ ಕಲಿಸಲಾಗುತ್ತಿಲ್ಲ ಎಂದು ಇಲಾಖೆ ಗಮನಿಸಿದೆ. ಇನ್ನು ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳು, ಮೊದಲೇ ರೆಕಾರ್ಡ್ ಮಾಡಿದ ವಿಡಿಯೋ ತರಗತಿಗಳು ಇತ್ಯಾದಿಗಳನ್ನು ನಡೆಸುತ್ತಿವೆ. ಮಕ್ಕಳ ಕಾರ್ಯಕ್ಷಮತೆಗಾಗಿ ಮೌಲ್ಯಮಾಪನ ಮಾಡುವುದು ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪರೀಕ್ಷೆಗಳನ್ನು ನಡೆಸುವುದು ಅಗತ್ಯವಾಗಿರುವುದರಿಂದ, ತರಗತಿಗಳನ್ನು ನಡೆಸಲು ಅನುಮತಿ ನೀಡುವಂತೆ ಇಲಾಖೆ ಸರ್ಕಾರವನ್ನು ಕೋರಿದೆ.
ಕಳೆದ ಬಾರಿ ಕೊರೊನಾದಿಂದ ಮೊದಲ ಬಾರಿಗೆ ಒಂಬತ್ತನೇ ತರಗತಿಯವರೆಗಿನ ಮಕ್ಕಳಿಗೆ ಕಳೆದ ಬಾರಿ ಯಾವುದೇ ಪರೀಕ್ಷೆಯಿಲ್ಲದೆ ಬಡ್ತಿ ನೀಡಲಾಗಿತ್ತು. ಆದರೆ ಈ ವರ್ಷ ಶಿಕ್ಷಣ ಇಲಾಖೆ ಪರೀಕ್ಷೆ ಮತ್ತು ಮೌಲ್ಯಮಾಪನವನ್ನು ನಡೆಸಲು ಈಗಾಗಲೇ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅದರಂತೆ ಆರನೇ ತ್ರಗತಿಯಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪರ್ಯಾಯ ಬೋಧನೆ ಮತ್ತು ಘಟಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಹೀಗಾಗಿ 1 ರಿಂದ 5 ರವರೆಗಿನ ತರಗತಿಗಗಳಿಗೂ ಪರೀಕ್ಷೆ ಮತ್ತು ಮೌಲ್ಯಮಾಪನ ಮಾಡಲು ಅನುಕೂಲ ಆಗುವಂತೆ ತರಗತಿ ತೆರೆಯಲು ಸರ್ಕಾರದ ಅನುಮತಿ ಕೋರಿ ಇಂತಹ ಮನವಿಯನ್ನು ಸಲ್ಲಿಸಲಾಗಿದೆ.
ಶಾಲಾ ಆರಂಭದ ಕುರಿತಂತೆ ಮಾತಾನಾಡಿರುವ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ, ವಿ ಅನ್ಬುಕುಮಾರ್ " ಕೊವಿಡ್ ತಜ್ಞರ ಸಮಿತಿಯಿಂದ ಸಲಹೆ ಪಡೆದ ನಂತರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುವ ನಿರೀಕ್ಷೆಯಿದೆ" ಎಂದು ಹೇಳಿದ್ದಾರೆ.