ಬೆಂಗಳೂರು, ಮಾ. 03 (DaijiworldNews/SM): ಗುರುವಾರದಿಂದ ರಾಜ್ಯ ವಿಧಾನ ಮಂಡಲ ಅಧಿವೇಶನ ಆರಂಭಗೊಳ್ಳಲಿದೆ. ಸಿಡಿ ಪ್ರಕರಣ ಸೇರಿದಂತೆ ಹಲವು ಸವಾಲುಗಳು ಅಧಿವೇಶನದಲ್ಲಿ ಸರಕಾರಕ್ಕೆ ಇಕ್ಕಟ್ಟಿಗೆ ಸಿಲುಕಿಸಲಿದೆ.
ಹಿಂದೆಂದೂ ಇಲ್ಲದಷ್ಟು ಆರ್ಥಿಕ ಸಂಕಷ್ಟ, ಎಲ್ಲಾ ಸಮುದಾಯಗಳನ್ನು ಸಂತೃಪ್ತಿಪಡಿಸುವ ಸವಾಲುಗಳಿದ್ದು, ಅದರೊಂದಿಗೆ ಸಿಡಿ ಪ್ರಕರಣ ಕೂಡ ಪ್ರತಿಪಕ್ಷಗಳಿಗೆ ಅಸ್ತ್ರವಾಗಲಿವೆ. ಈಗಾಗಲೇ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡುತ್ತಿರುವ ಕಾಂಗ್ರೆಸ್ ಗೆ ಸರಕಾರ ವೈಫಲ್ಯಗಳು, ಬೆಲೆ ಏರಿಕೆ ಇತ್ಯಾದಿ ಪ್ರಮುಖ ಅಸ್ತ್ರಗಳಾಗಳಿವೆ. ಹಾಗೂ ಸರಕಾರದ ಕಾಲೆಳೆಯಲು ತುದಿಗಾಲಲ್ಲಿ ನಿಂತಿವೆ.
ರಮೇಶ್ ಜಾರಕಿ ಹೊಳಿ ರಾಸಲೀಲೆ ಪ್ರಕರಣ ಸದನದಲ್ಲಿ ಪ್ರತಿಧ್ವನಿಸಲಿದೆ. ಈಗಾಗಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ, ಸದನದಲ್ಲಿ ಈ ವಿಚಾರ ಅಲ್ಲಲ್ಲಿ ಮತ್ತೆ ಮತ್ತೆ ಪ್ರಸ್ತಾಪಗೊಂಡು ಸರಕಾರವನ್ನು ಮುಜುಗರಗೊಳಿಸುವುದು ಪ್ರತಿಪಕ್ಷಗಳ ಹುನ್ನಾರವಾಗಿದೆ. ಮತ್ತೊಂದೆಡೆ ಮೀಸಲಾತಿಗಾಗಿ ವಿವಿಧ ಸಮುದಾಯಗಳು ನಡೆಸಿರುವ ಹೋರಾಟ ಸರ್ಕಾರಕ್ಕೆ ಇರುಸು – ಮುರುಸು ಉಂಟುಮಾಡಲಿದೆ.