ಮೈಸೂರು, ಮಾ.03 (DaijiworldNews/PY): ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಉದ್ಬೂರು ಗೇಟ್ ವಲಯದಲ್ಲಿ ಮಾ.3ರ ಬುಧವಾರ 3.30 ರ ಸುಮಾರಿಗೆ ಕಾಳ್ಗಿಚ್ಚು ಕಾಣಿಸಿಕೊಂಡಿದೆ.
ಸಾಂದರ್ಭಿಕ ಚಿತ್ರ
ಅರಣ್ಯ ಅಧಿಕಾರಿಗಳು ಭಾರೀ ಪ್ರಮಾಣದ ಬೆಂಕಿಯನ್ನು ನಂದಿಸಲು ಹರಸಾಹಸ ಪಡುತ್ತಿದ್ದಾರೆ.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವತಿಯಿಂದ ವಿಶ್ವ ವನ್ಯಜೀವಿ ದಿನದ ಅಂಗವಾಗಿ ದಮ್ಮನಕಟ್ಟೆ ಇಲಾಖೆಯ ವಲಯ ಕಚೇರಿಯಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಹಿರಿಯ ಅಧಿಕಾರಗಳು ಪಾಲ್ಗೊಂಡಿದ್ದಾರೆ.
"ಮೂವತ್ತು ಎಕರೆಗೂ ಅಧಿಕ ಅರಣ್ಯ ಬೆಂಕಿಗೆ ಆವರಿಸಿದ್ದು, ಬೆಂಕಿ ನಂದಿಸುವ ಕಾರ್ಯ ಇನ್ನು ಪ್ರಗತಿಯಲ್ಲಿದೆ" ಎಂದು ಮೂಲಗಳು ತಿಳಿಸಿವೆ.