ಶಿವಮೊಗ್ಗ, ಮಾ.03 (DaijiworldNews/MB) : ''ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರ ವಿರುದ್ದ ಷಡ್ಯಂತ್ರ ನಡೆದಿದ್ದು ಅದು ತನಿಖೆಯಲ್ಲಿ ಹೊರಬರಲಿದೆ. ಯಾರೋ ನಡೆಸಿದ ಷಡ್ಯಂತ್ರದಲ್ಲಿ ಅವರು ಸಿಲುಕಿದ್ದಾರೆ'' ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.
ಹೆಲಿಪ್ಯಾಡ್ನಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ''ಸಂತ್ರಸ್ಥೆಯೇ ನೇರವಾಗಿ ದೂರು ನೀಡದೆ ಮೂರನೇ ವ್ಯಕ್ತಿ ದೂರು ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸತ್ಯಾಂಶ ತಿಳಿಯಲು ಸ್ವಲ್ಪ ಕಾಲಾವಕಾಶ ಬೇಕಾಗಿದೆ'' ಎಂದು ಹೇಳಿದರು.
''ಈಗಾಗಲೇ ಪಕ್ಷದ ವರಿಷ್ಠರು ಈ ಎಲ್ಲಾ ವಿಚಾರದ ಬಗ್ಗೆ ಗಮನ ಹರಿಸುತ್ತಿದ್ದು ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ'' ಎಂದರು.