ಬೆಂಗಳೂರು,ಮಾ 03 (DaijiworldNews/MS): ಯುವ ಸಂಘಟನೆ ಮತ್ತು ವಿದ್ಯಾರ್ಥಿ ಸಂಘಟನೆಯಲ್ಲಿ ಚುನಾವಣೆಯನ್ನು ನಡೆಸಿದ್ದಾಗಿ ನನ್ನ ವಿರುದ್ದ ನನ್ನ ಸ್ವಂತ ಪಕ್ಷದ ಜನರೇ ತಿರುಗಿಬಿದ್ದಿದ್ದು, ಆಗ ನಾನು ಅಕ್ಷರಶಃ ಶಿಲುಬೆಗೇರಿಸಲ್ಪಟ್ಟ ಪರಿಸ್ಥಿತಿಯಲ್ಲಿದ್ದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೇಸರ ವ್ಯಕ್ತಪಡಿಸಿದ್ದಾರೆ.
ಯುಎಸ್ ಯೂನಿವರ್ಸಿಟಿ ಆಯೋಜಿಸಿದ್ದ ವೆಬಿನಾರ್ ನಲ್ಲಿ ಮಾತನಾಡಿದ ಅವರು" ಪಾರ್ಟಿಯೊಳಗಿನ ಪ್ರಜಾಪ್ರಭುತ್ವ ಚುನಾವಣೆ ಅಗತ್ಯವಾಗಿದೆ., ಆದರೆ ವಿಚಾರವಾಗಿ ವಿರೋಧ ಎದುರಿಸಿದ ಪ್ರಥಮ ನಾಯಕ ನಾನೇ ಯೂತ್ ಕಾಂಗ್ರೆಸ್ ಮತ್ತು ಎನ್ ಎಸ್ ಯು ಐ ಚುನಾವಣೆ ನಡೆಸಿದ್ದಕ್ಕೆ ಸ್ವಪಕ್ಷೀಯರೇ ತಮ್ಮ ವಿರುದ್ಧ ಸಿಟ್ಟಾಗಿದ್ದಾರೆ. ಇದರಿಂದಾಗಿ ನಾನು ಗಂಭೀರ ಆರೋಪಗಳು ಕೇಳಬೇಕಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷ ನಂಬಿಕೊಂಡಿರುವ ಸಿದ್ಧಾಂತವು ಸಂವಿಧಾನದ ಸಿದ್ಧಾಂತವಾಗಿದೆ, ಆದ್ದರಿಂದ ಪಕ್ಷವು ಪ್ರಜಾಪ್ರಭುತ್ವವಾಗಿರುವುದು ಹೆಚ್ಚು ಮುಖ್ಯ, ಹಾಗೆಯೇ ಪಕ್ಷದೊಳಗಿನ ಪ್ರಜಾಪ್ರಭುತ್ವ ಚುನಾವಣೆ ಸಂಪೂರ್ಣವಾಗಿ ವಿಮರ್ಶಾತ್ಮಕ. ಆದರೆ ನಮ್ಮ ಪಕ್ಷದ ಆಂತರಿಕ ಚುನಾವಣೆ ಬಗ್ಗೆ ಪ್ರಶ್ನಿಸುವವರು ಬೇರೆ ಬಿಜೆಪಿ, ಸಮಾಜವಾದಿ ಮುಂತಾದ ಪಕ್ಷಗಳನ್ನು ಏಕೆ ಪ್ರಶ್ನಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯ ದುರಹಂಕಾರದ ವಿರುದ್ಧ ಹೋರಾಡಲು ಕಾಂಗ್ರೆಸ್ ಪಕ್ಷ ಬದಲಾಗಬೇಕಿದ್ದು 2014 ರ ನಂತರ ಪ್ರತಿಪಕ್ಷಗಳೆಲ್ಲಾವು ಒಟ್ಟಾಗಿ ದೇಶಕ್ಕಾ ಹೋರಾಡುತ್ತಿವೆ ಹೊರತು ಚುನಾವಣೆ ಗೆದ್ದು ಅಧಿಕಾರ ಪಡೆಯಲು ಅಲ್ಲ ಎಂದು ಅವರು ಹೇಳಿದ್ದಾರೆ.