ಬೆಂಗಳೂರು,ಮಾ 03 (DaijiworldNews/MS): ಕೆಲಸದ ಕೊಡಿಸುವ ನೆಪದಲ್ಲಿ ಯುವತಿಯೊಬ್ಬಳನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಕೊನೆಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಘಟನೆಯ ಕುರಿತು ರಾಜ್ಯ ಸರ್ಕಾರವನ್ನು ವಿಪಕ್ಷಗಳು ಟೀಕಿಸತೊಡಗಿದೆ.
"ನೋಡಿದವರ ಬಣ" ಹಾಗೂ "ಮಾಡಿದವರ ಬಣ" ಎನ್ನುವ ಬಿಜಿಪಿಯ ಅಂತರಿಕ ಕಿತ್ತಾಟದಲ್ಲಿ ಒಂದು ವಿಕೆಟ್ ಬಿದ್ದಿದೆ. ನಿಮ್ಮ ಸಚಿವರು ಹಾಸಿಗೆಯಲ್ಲೂ "ಯಡಿಯೂರಪ್ಪ ಭ್ರಷ್ಟ" ಎಂದು ಕನವರಿಸುತ್ತಿದ್ದಾರೆ ಎಂದರೆ ವಿಜಯೇಂದ್ರ ಸರ್ವಿಸ್ ಟ್ಯಾಕ್ಸ್ ಲೂಟಿ ಎಷ್ಟರ ಮಟ್ಟಿಗಿರಬಹುದು! ನಿಮ್ಮವರೇ ನಿಮಗೆ ಬ್ಯಾಕ್ ಮೇಲ್ ಜನತಾ ಪಾರ್ಟ್ ಎಂದಿದ್ದು ಇದಕ್ಕೇನಾ? ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ವ್ಯಂಗ್ಯವಾಡಿದೆ.
ಧರ್ಮ, ಸಂಸ್ಕೃತಿ ರಕ್ಷಣೆಯಲ್ಲಿ ಅತ್ಯುತ್ತಮ ಪರ್ಫಾರ್ಮೆನ್ಸ್ ರಾಜ್ಯ ಬಿಜೆಪಿ ನಾಯಕರು ತೋರಿದ್ದಾರೆ. ಕಳೆದ ಬಾರಿಯಲ್ಲಿ ರೇಣುಕಾಚಾರ್ಯ, ಹಾಲಪ್ಪ, ರಘುಪತಿ ಭಟ್, ಸವದಿ,ಸಿಸಿ ಪಾಟೀಲ್, ರಾಮ ದಾಸ್, ಕೃಷ್ಣ ಪಾಲೆಮಾರ್, ಇನ್ನು ಈ ಬಾರಿಯಲ್ಲಿ ಅರವಿಂದ ಲಿಂಬಾವಳಿ, ರಮೇಶ್ ಜಾರಕಿಹೊಳಿ ಲಿಸ್ಟ್ ಮುಂದುವರೆಯುವುದು ಅಲ್ಲವೇ ಎಂದು ಕುಹಕವಾಡಿದೆ.
ಮಾನ, ಮರ್ಯಾದೆ, ಲಜ್ಜೆ ಮೂರೂ ಬಿಟ್ಟಿರುವ ಬಿಜೆಪಿಗೆ ಮುಜುಗರವೇ!? ಮುಜುಗರವೆಂದರೆ ಏನೆಂದು ಅರಿಯದ ಬಿಜೆಪಿಗೆ್ ಪಕ್ಷಕ್ಕೆ ಮುಜುಗರವಾಗುತ್ತದೆಯೇ !? ಎಂದು ಮತ್ತೊಂದು ಟ್ವೀಟ್ ಮಾಡಿ ರಾಜ್ಯ ಸರ್ಕಾರದ ಕಾಲೆಳೆದಿದೆ.