ಬೆಂಗಳೂರು, ಮಾ.03 (DaijiworldNews/PY): "ರಾಜೀನಾಮೆ ನೀಡಿದ ಸಚಿವ ರಮೇಶ್ ಜಾರಕಿಹೊಳಿ ಅವರ ಸಹೋದರ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಿಎಂ ನಿನ್ನ ಸಿಡಿ ರಿಲೀಸ್ ಮಾಡುತ್ತೇನೆ ಎಂದು ಸಿಎಂ ಬಿಎಸ್ವೈ ಅವರನ್ನು ಹೆದರಿಸುತ್ತಿದ್ದಾರೆ" ಎಂದು ಸಿದ್ದರಾಮಯ್ಯ ಆರೋಪಿಸಿದರು.
ಬುಧವಾರ ನಡೆದ ಜನಧ್ವನಿ ರ್ಯಾಲಿಯಲ್ಲಿ ಈ ವಿಚಾರದ ಬಗ್ಗೆ ಮಾತನಾಡಿದ ಅವರು, "ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಿಎಂ ಬಿಎಸ್ವೈ ಅವರನ್ನು ಹೆದರಿಸುತ್ತಿದ್ದು, ಸಿಎಂ ನಿನ್ನ ಸಿಡಿ ರಿಲೀಸ್ ಮಾಡುತ್ತೇನೆ ಎಂದಿದ್ದಾರೆ" ಎಂದು ಹೇಳಿದರು.
"ಸಿಡಿ ನೋಡಿದರೆ ಅಸಹ್ಯವಾಗುತ್ತದೆ. ಇವರೆಲ್ಲಾ ಮಂತ್ರಿಗಳಾ?. ಇವರೆಲ್ಲ ಯಡಿಯೂರಪ್ಪ ಅವರ ಮಂತ್ರಿ ಮಂಡಲದವರು. ರಮೇಶ ಜಾರಕಿಹೊಳಿ ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ ಅವರು ಬ್ಲಾಕ್ ಮೇಲ್ ಮಾಡುತ್ತಿದ್ದು, ನಮ್ಮ ಅಣ್ಣನಿಗೆ ಏನಾದರು ಮಾಡಿದರೆ, ನಿನ್ನ ಸಿಡಿ ಬಿಡುಗಡೆ ಮಾಡಬೇಕಾಗುತ್ತದೆ ಎಂದು ಹೆದರಿಸುತ್ತಿದ್ದಾರೆ" ಎಂದರು.