ನವದೆಹಲಿ, ಮಾ.03 (DaijiworldNews/MB) : ಕೊರೊನಾ ಲಸಿಕೆ ಎರಡನೆ ಹಂತದ ಅಭಿಯಾನ ಮಾ.1 ರ ಇಂದು ಆರಂಭವಾಗಿದ್ದು ದೇಶದ ಮೊದಲ ಪ್ರಜೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನವದೆಹಲಿಯ ಆರ್ ಆರ್ ಆಸ್ಪತ್ರೆಯಲ್ಲಿ ಬುಧವಾರ ಕೊರೊನಾ ಸೋಂಕು ಲಸಿಕೆಯನ್ನು ಹಾಕಿಸಿಕೊಂಡರು.
ಪ್ರಧಾನಿ ನರೇಂದ್ರ ಮೋದಿ ಮಾ.1 ರಂದೇ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದು ಲಸಿಕೆಗೆ ಅರ್ಹರಾದ ಎಲ್ಲರೂ ಲಸಿಕೆ ಪಡೆದು ಭಾರತವನ್ನು ಕೋವಿಡ್ ಮುಕ್ತವನ್ನಾಗಿಸಿ ಎಂದು ಹೇಳಿದ್ದರು.
ಇನ್ನು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಸಾಂಕ್ವೆಲಿಮ್ ನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (ಪಿಎಚ್ ಸಿ) ಕೊರೊನಾ ಲಸಿಕೆ ಪಡೆದಿದ್ದಾರೆ. ಇನ್ನು ಅನೇಕ ಗಣ್ಯರು ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ.
60 ವರ್ಷ ಮೇಲ್ಪಟ್ಟವರು ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟ ಕಾಯಿಲೆ ಪೀಡಿತರು ಪಡೆಯಬಹುದು. ಲಸಿಕೆ ಪಡೆಯುವ ಕೇಂದ್ರದಲ್ಲಿ ಆಯಾ ದಿನದ ಅಪಾಯಿಮೆಂಟ್ ಅವಕಾಶವಿದ್ದು ಇದು ಅದೇ ದಿನ ಮದ್ಯಾಹ್ನ 3 ಗಂಟೆಗೆ ಅಂತ್ಯವಾಗಲಿದೆ.