ಹೈದರಾಬಾದ್, ಮಾ.03 (DaijiworldNews/PY): ಯುವತಿ ತನ್ನ ಪ್ರೀತಿ ನಿರಾಕರಿಸಿದ ಕೋಪಕ್ಕೆ ಹಾಡಹಗಲೇ ಭಗ್ನಪ್ರೇಮಿಯೋರ್ವ ಯುವತಿಯ ಮೇಲೆ ತಲ್ವಾರ್ನಿಂದ ಇರಿದ ಘಟನೆ ಹೈದರಾಬಾದ್ನ ನರ್ಸಿಂಗ್ ಪೊಲೀಸ್ ಠಾಣೆ ವ್ಯಾಪ್ತಿಯ ಹೈದರ್ ಷಾ ಕೋಟ್ ಗ್ರಾಮದ ಲಕ್ಷ್ಮೀ ನಗರ ಕಾಲೋನಿಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಹಲ್ಲೆ ಮಾಡಿದ ಯುವಕನನ್ನು ಶಾರುಖ್ ಖಾನ್ ಎಂದು ಗುರುತಿಲಾಗಿದೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವತಿಯನ್ನು ಮೆಹಿದಿಪಟ್ಟಣಂನ ನಾನಾಲ್ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು ತನಿಖೆ ನಡೆಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಆರೋಪಿ ಹಾಗೂ ಹಲ್ಲೆಗೊಳಗಾದ ಯುವತಿ ಇಬ್ಬರು ಪರಸ್ಪರ ಪರಿಚಯಸ್ಥರಾಗಿದ್ದರು. ಯುವತಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಆಕೆಯನ್ನು ಶಾರುಖ್ ಪ್ರೀತಿಸುತ್ತಿದ್ದ ಎನ್ನಲಾಗಿದೆ.
ಸಂತ್ರಸ್ಥ ಯುವತಿ ತನನ ಪೋಷಕರೊಂದಿಗೆ ಹೈದರಾಬಾದನ್ನ ಹೈದರ್ಶಕೋಟೆಯ ಅಪಾರ್ಟ್ಮೆಂಟ್ವೊಂದರಲ್ಲಿ ವಾಸಿಸುತ್ತಿದ್ದಳು. ಕೆಲಸವೊಂದರ ನಿಮಿತ್ತ ಸಂತ್ರಸ್ಥ ಯುವತಿ ಎರಡು ವರ್ಷಗಳ ಹಿಂದೆ ಜಾವೇದ್ ಹಬೀಬ್ ಸಲೂನ್ನಲ್ಲಿ ಕೆಲಸ ಮಾಡುತ್ತಿದ್ದ ಶಾರುಖ್ ಖಾನ್ ಅನ್ನು ಭೇಟಿಯಾಗಿದ್ದಳು. ಇದಾದ ಬಳಿಕ ಇಬ್ಬರಿಗೆ ಪರಿಚಯವಾಗಿದೆ. ನಂತರ ಯುವತಿಯ ಹಿಂದೆ ಬಿದ್ದಿದ್ದ ಶಾರುಖ್ ಆಕೆಯನ್ನು ನಾನು ಪ್ರೀತಿಸುತ್ತಿದ್ದೇನೆ ಎಂದು ಹೇಳುತ್ತಿದ್ದ ಎನ್ನಲಾಗಿದೆ.
ಯುವತಿ ಈ ವಿಚಾರದ ಬಗ್ಗೆ ಆತನಿಗೆ ಎಚ್ಚರಿಸಿದ್ದಳು ಎನ್ನಲಾಗಿದೆ. ಏತನ್ಮಧ್ಯೆ, ಯುವತಿಯ ಪೋಷಕರು ಆಕೆಗೆ ವಿವಾಹ ಮಾಡಲು ಮುಂದಾಗಿದ್ದು, ಈ ಬಗ್ಗೆ ತಿಳಿದ ಶಾರುಖ್ ಆಕೆಯನ್ನು ತೊಂದರೆ ನೀಡಲು ಶುರು ಮಾಡಿದ್ದಾನೆ. ಈ ಸಂದರ್ಭ ಯುವತಿ ಶಾರುಖ್ನನ್ನು ತಿರಸ್ಕರಿಸಿದ ಕಾರಣ ಆಕೆಯ ಮೇಲೆ ಕೋಪ ಬೆಳೆಸಿಕೊಂಡ ಆತ ಯುವತಿಯ ವಾಸಿಸುತ್ತಿದ್ದ ಅಪಾರ್ಟ್ಮೆಂಟ್ ಬಳಿ ಹೋಗಿ ಆಕೆಗೆ ಕರೆ ಮಾಡಿದ್ದು, ನಿನ್ನ ಜೊತೆ ಮಾಡನಾಡಬೇಕು ಎಂದು ಯುವತಿಯನ್ನು ಕರೆಸಿಕೊಂಡಿದ್ದಾನೆ.
ಈ ಸಂದರ್ಭ ಆತ ತನ್ನ ಪ್ರೀತಿಯನ್ನು ಒಪ್ಪಿಕೊಳ್ಳುವಂತೆ ಕೇಳಿದ್ದಾನೆ. ಯುವತಿ ಪ್ರೀತಿ ನಿರಾಕರಿಸಿದ್ದು, ಈ ವೇಳೆ ಆತ ತಂದಿದ್ದ ಹರಿತವಾದ ತಲ್ವಾರ್ನಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಸಂದರ್ಭ ಯುವತಿ ಜೋರಾಗಿ ಕೂಗಿಕೊಂಡಿದ್ದು, ಜನರು ಓಡಿ ಬಂದಾಗ ಆತ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಆದರೆ, ಆತನನ್ನು ಬೆನ್ನಟ್ಟಿದ್ದ ಸ್ಥಳೀಯರು ಆತನನ್ನು ಹಿಡಿದಿದ್ದಾರೆ.
ಹಲ್ಲೆಗೊಳಗಾದ ಯುವತಿ ತೀವ್ರ ಗಾಯಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವತಿಯ ಗಂಟಲು, ಹೊಟ್ಟೆ, ಬೆನ್ನಿಗೆ ತೀವ್ರವಾದ ಗಾಯಗಳಾಗಿದ್ದು, ಯುವತಿಯ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.