ಮುಂಬೈ, ಮಾ.03 (DaijiworldNews/PY): ನಟಿ ತಾಪ್ಸಿ ಪನ್ನು ಹಾಗೂ ಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ಅವರ ಮನೆ ಮೇಲೆ ಹಾಗೂ ಕಚೇರಿಯ ಮೇಲೆ ಐಟಿ ದಾಳಿ ನಡೆಸಿದೆ.
ಇಬ್ಬರು ಸೆಲೆಬ್ರಿಟಿಗಳು ಮುಂಬೈನಲ್ಲಿ ತಮ್ಮ ನಿವಾಸ ಹಾಗೂ ಕಚೇರಿಯನ್ನು ಹೊಂದಿದ್ದಾರೆ. ಐಟಿ ಅಧಿಕಾರಿಗಳು ಅವುಗಳ ಮೇಲೆ ದಾಳಿ ನಡೆಸಿದ್ದಾರೆ. ತೆರಿಗೆ ವಂಚನೆಗೆ ಸಂಬಂಧಿಸಿದಂತೆ ಶೋಧ ನಡೆಸಿರುವುದಾಗಿ ಹೇಳಲಾಗಿದೆ.
ಮಧು ಮಂಟೆನಾ ಅವರು, ಅನುರಾಗ್ ಹಾಗೂ ವಿಕಾಸ್ ಅವರ ಜೊತೆ ಫ್ಯಾಂಟಮ್ ಫಿಲ್ಮ್ಸ್ ಪ್ರೊಡಕ್ಷನ್ ಹೌಸ್ನ ಮಾಲೀಕತ್ವವನ್ನು ಹೊಂದಿದ್ದು, ಅವರ ಮೇಲೆಯೂ ಕೂಡಾ ಐಟಿ ದಾಳಿ ನಡೆಸಿರುವುದಾಗಿ ಹೇಳಲಾಗಿದೆ.