ನವದೆಹಲಿ, ಮಾ 03 (DaijiworldNews/MS): ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಗಡ್ಡ, ಕೂದಲನ್ನು ಟ್ರಿಮ್ ಮಾಡಿಕೊಂಡು ಕಾಣಿಸಿಕೊಳ್ಳುವ ಪ್ರಧಾನಿ ಮೋದಿ ಇತ್ತೀಚಿಗೆ ಹೇರ್ ಕಟ್, ಹಾಗೂ ಶೇವ್ ಮಾಡಿಸಿಕೊಳ್ಳುತ್ತಿಲ್ಲ. ದೇಶದಲ್ಲಿ ಲಾಕ್ ಡೌನ್ ಘೋಷಣೆಯಾದ ಬಳಿಕ ಟ್ರಿಮ್ ಮಾಡಿಸಿಕೊಂಡಿಲ್ಲ. ಅದಕ್ಕೆ ಕಾರಣ ಏನಿರಬಹುದು ಕುತೂಹಲ ಎಲ್ಲರಲ್ಲೂ ಇದೆ.
ಇದೀಗ ಮೋದಿ ಅವರು ಬೆಳೆಸುತ್ತಿರುವ ಗಡ್ಡಕ್ಕೂ ಜಿಡಿಪಿಗೂ ಸಂಬಂಧ ಕಲ್ಪಿಸಿ ಕಾಂಗ್ರೆಸ್ ನಾಯಕ ಶಶಿ ತರೂರು, ಟ್ವೀಟ್ ಮಾಡಿದ್ದು, "ಗ್ರಾಫಿಕ್ ವಿವರಣೆ" ಯ ಎಂದರೆ ಇದೇ ಅರ್ಥ.!" ಎಂಬ ಟ್ಯಾಗ್ ಲೈನ್ ಕೊಟ್ಟಿದ್ದಾರೆ. ದೇಶದ ಆರ್ಥಿಕ ಪ್ರಗತಿಯ ಅಳತೆಗೋಲು ಕೆಳಮಟ್ಟಕ್ಕೆ ಕುಸಿಯುತ್ತಿದೆ. ಅದು ಪ್ರಧಾನಿ ಅವರು ಬಿಟ್ಟ ಗಡ್ಡದಂತೆ ಎಂದು ಜಿಡಿಪಿಯನ್ನು ಮೋದಿ ಗಡ್ಡಕ್ಕೆ ಹೋಲಿಕೆ ಮಾಡಿರುವ ಗ್ರಾಫಿಕ್ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.
ಇನ್ನು ಇದಕ್ಕೆ ತಿರುಗೇಟು ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು, ಮೋದಿಯವರ ಗಡ್ಡ ಬೆಳೆಯುತ್ತಿದ್ದಂತೆ ಕಾಂಗ್ರೆಸ್ ಕುಸಿಯುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ " ಶಶಿತರೂರ್ ಅವರ ಪ್ರಯಾಣ ಯುಎನ್ನಲ್ಲಿ ಸೇವೆ ಸಲ್ಲಿಸುವುದರಿಂದ ಹಿಡಿದು ಬ್ಯಾಟ್ಗಳ ಜೊತೆಗೆ ಮೇಡಮ್ಗೆ ಸೇವೆ ಸಲ್ಲಿಸುವವರೆಗೆ, ಎಂತಹ ಕುಸಿತ!
ನಿಮ್ಮ ಮಾನಸಿಕ ಸಮತೋಲನವನ್ನು ಕಳೆದುಕೊಂಡಿರುವುದರಿಂದ ಮತ್ತು ರಾಹುಲ್ ಗಾಂಧಿಯವರ ಹೆಜ್ಜೆಗಳನ್ನೇ ಅನುಕರಣೆ ಮಾಡುತ್ತಿರುವ ನಿಮಗೆ ಖಂಡಿತವಾಗಿಯೂ ಸಹಾಯದ ಅವಶ್ಯಕತೆ ಇದೆ.. ಅದಷ್ಟು ಬೇಗ ಚೇತರಿಸಿಕೊಳ್ಳಿ" ಎಂದು ಹೇಳಿದ್ದಾರೆ.