ಬೆಂಗಳೂರು, ಮಾ. 02 (DaijiworldNews/SM): ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ರಾಸಲೀಲೆಯ ಸಿಡಿ ವೈರಲ್ ಆಗುತ್ತಿದ್ದಂತೆ ಜಾರಕಿಹೊಳಿಯವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಾಗರಿಕ ಹಕ್ಕು ಹೋರಾಟ ಸಮಿತಿ ಆಗ್ರಹಿಸಿದೆ.
ಆರಂಭದಲ್ಲಿ ಒಂದು ಪ್ರಾಜೆಕ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವರನ್ನು ಸಂಪರ್ಕಿಸಿದ್ದ ಯುವತಿ ಬಳಿಕ ಸಚಿವರೊಂದಿಗೆ ಯುವತಿ ಸಲುಗೆಯಿಂದ ಮಾತನಾಡುತ್ತಿರುವುದು ಆಡಿಯೋದಲ್ಲಿ ರೆಕಾರ್ಡ್ ಆಗಿದೆ.
ಈ ನಡುವೆ ಯುವತಿಗೆ ಕೆಲಸ ಕೊಡುವ ಭರವಸೆ ಕೊಟ್ಟು ಆಕೆಯನ್ನು ಸಚಿವರು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಸಚಿವರೊಂದಿಗಿರುವ ಅಶ್ಲೀಲ ಖಾಸಗಿ ವೀಡಿಯೋ ಸದ್ಯ ವೈರಲ್ ಆಗುತ್ತಿದೆ. ಈ ನಡುವೆ ಸಚಿವ ಜಾರಕಿಹೊಳಿ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ. ನಾಗರಿಕ ಹಕ್ಕು ಹೋರಾಟ ಸಮಿತಿ ಅದ್ಯಕ್ಷ ದಿನೇಶ್ ಕಲ್ಲಹಳ್ಳಿ ದೂರು ನೀಡಿದ್ದಾರೆ. ಈ ನಡುವೆ ಪೊಲೀಸ್ ವರಿಷ್ಠಾಧಿಕಾರಿ ಕಮಲ್ಪಂತ್ಗೆ ಸಮಗ್ರ ತನಿಖೆಗೆ ಮನವಿ ಮಾಡಲಾಗಿದೆ.
ಇನ್ನು ರಾಸಲೀಲೆಯ ವೀಡಿಯೋ ವೈರಲ್ ಆಗುತ್ತಿದ್ದಂತೆ ಪ್ರತಿ ಪಕ್ಷಗಳು ಅದನ್ನೇ ಅಸ್ತ್ರವಾಗಿ ಬಳಸಿಕೊಂಡಿವೆ. ಈ ಹಿನ್ನೆಲೆ ಸಚಿವರ ತಲೆದಂಡ ಬಹುತೇಕ ಪಕ್ಕ ಎನ್ನಲಾಗಿದೆ.