ನವದೆಹಲಿ, ಮಾ.02 (DaijiworldNews/HR): ಲೋಕಸಭಾ ಟಿವಿ ಮತ್ತು ರಾಜ್ಯಸಭಾ ಟಿವಿಯನ್ನು ವಿಲೀನಗೊಳಿಸಿದ್ದು, 'ಸಂಸದ್ ಟಿವಿ' ಎಂಬ ಹೆಸರಿನಡಿ ಚಾನೆಲ್ ತೆರೆಯಲು ಸಂಸತ್ತಿನ ಉಭಯ ಸದನಗಳ ಅಧ್ಯಕ್ಷರು ಒಪ್ಪಿಗೆ ನೀಡಿದ್ದು, ಈ ಸಂಸದ್ ಟಿವಿಯ ಸಿಇಒ ಆಗಿ ನಿವೃತ್ತ ಐಎಎಸ್ ಅಧಿಕಾರಿ ರವಿ ಕಪೂರ್ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಮಾರ್ಚ್ 1 ಮಂಗಳವಾರದಿಂದ ಒಂದು ವರ್ಷದ ತನಕ ರವಿ ಕಪೂರ್ ಅವರನ್ನು ಸಂಸದ್ ಟಿವಿಯ ಸಿಇಒ ಆಗಿ ನೇಮಕ ಮಾಡಲಾಗಿದೆ ಎಂದು ಲೋಕಸಭಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನು ಈ ಎರಡೂ ಚಾನೆಲ್ಗಳನ್ನು ವಿಲೀನ ಮಾಡಿದ್ದರು ಕೂಡ ಅದು ಎರಡು ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಲಿದೆ. ಒಂದು ವಿಭಾಗವು ಲೋಕಸಭಾ ಅಧಿವೇಶನಗಳನ್ನು ನೇರ ಪ್ರಸಾರ ಮಾಡಲಿದೆ. ಇನ್ನೊಂದು ರಾಜ್ಯಸಭೆಯ ಅಧಿವೇಶನಗಳನ್ನು ನೇರ ಪ್ರಸಾರ ಮಾಡಲಿದೆ" ಎಂದು ವರದಿಯಾಗಿದೆ.
ಇನ್ನು ನವೆಂಬರ್ 2019ರಲ್ಲಿ ಲೋಕಸಭೆಯ ಸಭಾಪತಿ ಓಂ ಬಿರ್ಲಾ ಮತ್ತು ರಾಜ್ಯಸಭಾ ಸಭಾಪತಿ ವೆಂಕಯ್ಯನಾಯ್ಡು ಈ ನಿರ್ಧಾರ ಕೈಗೊಂಡಿದ್ದರು ಎನ್ನಲಾಗಿದೆ.