ಮಧ್ಯ ಪ್ರದೇಶದ, ಮಾ.02 (DaijiworldNews/HR): ಜನವರಿ 28 ರಂದು ಮುಂಜಾನೆ 1.11 ಕ್ಕೆ ಇಮೇಲ್ ಮೂಲಕ ಜಿಲ್ಲೆಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಜೆಎಂಎಫ್ಸಿ) ಅವರಿಗೆ ಅಸಭ್ಯವಾಗಿ ಹುಟ್ಟುಹಬ್ಬದ ಶುಭಾಶಯಗಳನ್ನು ಕಳುಹಿಸಿದ ಆರೋಪದ ಮೇಲೆ ಮಧ್ಯಪ್ರದೇಶದ ರತ್ನಂನಲ್ಲಿನ ವಕೀಲರೊಬ್ಬರನ್ನು ಐಟಿ ಕಾಯ್ದೆ ಸೇರಿದಂತೆ ವಿವಿಧ ಆರೋಪಗಳ ಮೇಲೆ ಕೇಸು ದಾಖಲಿಸಲಾಗಿದೆ.
ಸಾಂಧರ್ಭಿಕ ಚಿತ್ರ
ಪ್ರಕರಣದ ಎಫ್ಐಆರ್ನಲ್ಲಿ ಆರೋಪಿ ವಿಜಯ್ ಸಿಂಗ್ ಯಾದವ್(37) ತನ್ನ ಒಪ್ಪಿಗೆಯಿಲ್ಲದೆ ಜಡ್ಜ್ ಅವರ ಪ್ರೊಫೈಲ್ ಚಿತ್ರವನ್ನು ತನ್ನ ಫೇಸ್ಬುಕ್ ಖಾತೆಯಿಂದ ಡೌನ್ಲೋಡ್ ಮಾಡಿಕೊಂಡು ಶುಭಾಶಯದ ಭಾಗವಾಗಿ "ಅಸಭ್ಯ ಸಂದೇಶ" ದೊಂದಿಗೆ ಕಳುಹಿಸಿದ್ದಾನೆ ಎಂದು ಹೇಳಲಾಗಿದೆ.
ಇನ್ನು ಮೇಲ್ ಹೊರತುಪಡಿಸಿ, ಯಾದವ್ ಅವರು ಜೆಎಂಎಫ್ಸಿಗೆ ಸ್ಪೀಡ್ ಪೋಸ್ಟ್ ಮೂಲಕ ಶುಭಾಶಯ ಪತ್ರವನ್ನು ಕಳುಹಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ರತ್ನಂ ಜಿಲ್ಲಾ ನ್ಯಾಯಾಲಯದ ಸಿಸ್ಟಮ್ ಆಫೀಸರ್ ಮಹೇಂದ್ರ ಸಿಂಗ್ ಚೌಹಾನ್ ಅವರ ದೂರಿನ ಆಧಾರದ ಮೇಲೆ ಫೆಬ್ರವರಿ 8 ರಂದು ಸ್ಟೇಷನ್ ರೋಡ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.