ನವದೆಹಲಿ, ಮಾ 02 (DaijiworldNews/MS):ಮದ್ಯಪ್ರದೇಶದ ಖಾಂಡ್ವಾದ ಬಿಜೆಪಿ ಸಂಸದ ನಂದ್ ಕುಮಾರ್ ಸಿಂಗ್ ಚೌಹಾಣ್ ಅವರು ದೆಹಲಿ-ಗುರುಗ್ರಾಮ್ನ ಮೇದಂತ ಆಸ್ಪತ್ರೆಯಲ್ಲಿ ಮಾ.1ರ ಸೋಮವಾರ ರಾತ್ರಿ ನಿಧನರಾದರು.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಕೊರೊನಾ ಸೋಂಕು ತಗುಲಿದ್ದು ಅವರನ್ನು ವೆಂಟಿಲೇಟರ್ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಕೊರೊನಾ ಪಾಸಿಟಿವ್ ಆಗಿದ್ದ ಅವರು ಜನವರಿ 11 ರಂದು ಭೋಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ದೆಹಲಿಯ ಮೇದಂತ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಚೌಹಾಣ್ ಅವರ ಪುತ್ರ ಹರ್ಷವರ್ಧನ್ ಚೌಹಾನ್ ಅವರು ತಂದೆಯ ಮರಣವನ್ನು ಖಚಿತಪಡಿಸಿದ್ದು , ಮೃತದೇಹವನ್ನು ಇಂದು ಮಧ್ಯಾಹ್ನ ಏರ್ ಆಂಬ್ಯುಲೆನ್ಸ್ ಮೂಲಕ ದೆಹಲಿಯಿಂದ ಖಾಂಡ್ವಾ ವಾಯುನೆಲೆಗೆ ತಂದು ಮತ್ತು ಅಲ್ಲಿಂದ ಬುರ್ಹಾನ್ಪುರಕ್ಕೆ ಕರೆದೊಯ್ಯಲಾಗುವುದು ಎಂದು ಹೇಳಲಾಗುತ್ತಿದೆ. ಅಂತ್ಯಕ್ರಿಯೆ ಶಾಪುರದಲ್ಲಿ ನಡೆಯಲಿದೆ.
ಪ್ರಧಾನಿ ಮೋದಿ ಚೌಹಾಣ್ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.