ಬೆಳಗಾವಿ, ಮಾ. 01(DaijiworldNews/HR): "ಮಹದಾಯಿ ವಿಚಾರದಲ್ಲಿ ಕರ್ನಾಟಕ ಸರಕಾರ ಯಾವುದೇ ಕಾನೂನು ನಿಯಮ ಉಲ್ಲಂಘನೆ ಮಾಡಿಲ್ಲ, ನ್ಯಾಯಾಲಯದಲ್ಲಿ ನಮಗೆ ಜಯ ಸಿಗುವ ಸಂಪೂರ್ಣ ವಿಶ್ವಾಸವಿದೆ" ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕರ್ನಾಟಕ ಮಹದಾಯಿ ನೀರನ್ನು ತಿರುಗಿಸಿಕೊಂಡಿದೆ ಎಂದು ಸುಪ್ರೀಂಕೋರ್ಟ್ ನಲ್ಲಿ ಸುಳ್ಳು ಅಫಿಡವಿಟ್ ಸಲ್ಲಿಸಿದೆ. ಹೀಗಾಗಿ ಕೋರ್ಟ್ ವಾಸ್ತವಿಕ ಸ್ಥಿತಿಗತಿಗಳ ಬಗ್ಗೆ ವರದಿ ನೀಡುವಂತೆ ತಿಳಿಸಿದ್ದು, ಗೋವಾ ಹೇಳುವ ಪ್ರಕಾರ ನಾವೇನು ಕಾನೂನು ಉಲ್ಲಂಘನೆ ಮಾಡಿಲ್ಲ ಆದ ಕಾರಣ ನಾವು ಹೆದರುವ ಪ್ರಶ್ನೆಯೇ ಇಲ್ಲ" ಎಂದರು.
ಇನ್ನು "ಈ ವಿಷಯ ಅಂತರಾಜ್ಯ ಪ್ರಕರಣ ಆಗಿರುವುದರಿಂದ ನಾವು ನೇರವಾಗಿ ನೀರನ್ನು ತೆಗೆದುಕೊಳ್ಳಲು ಬರುವುದಿಲ್ಲ, ಇದಕ್ಕೆ ಕೇಂದ್ರ ಜಲ ಆಯೋಗ ಇಲಾಖೆಯ ಅನುಮತಿ ಬೇಕಿದ್ದು, ಸಿಡಬ್ಲ್ಯುಸಿ ಇಲಾಖೆಗೆ ಪದೇ ಪದೆ ಒತ್ತಡ ಹೇರಲಾಗುತ್ತಿದ್ದು, ಮುಂದಿನ ವಾರ ಮತ್ತೊಮ್ಮೆ ದೆಹಲಿಗೆ ತೆರಳಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾಗುತ್ತೇವೆ" ಎಂದು ಹೇಳಿದ್ದಾರೆ.