ಚೆನ್ನೈ, ಮಾ. 01(DaijiworldNews/HR): ಡಿಎಂಕೆ ಪಕ್ಷದ ವಿರುದ್ಧ ಅಮಿತ್ ಶಾ ಮಾಡಿರುವ ಭ್ರಷ್ಟಾಚಾರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಪಕ್ಷದ ನಾಯಕ ಎಂ.ಕೆ.ಸ್ಟಾಲಿನ್, "ತಮಿಳುನಾಡಿನಲ್ಲಿ ಬಿಜೆಪಿಯು ಆಡಳಿತಾರೂಢ ಎಐಎಡಿಎಂಕೆ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಭ್ರಷ್ಟಾಚಾರದ ಪರ ನಿಂತಿದೆ" ಎಂದು ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸ್ಟಾಲಿನ್, "ಭ್ರಷ್ಟಾಚಾರದಲ್ಲಿ ಮುಳುಗಿರುವ ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಒ ಪನ್ನೀರ್ಸೆಲ್ವಂ ಅವರೊಂದಿಗೆ ಬಿಜೆಪಿ ಕೈಜೋಡಿಸಿದ್ದು, ಈ ನಡೆ ಯಾವ ಪಕ್ಷ ಭ್ರಷ್ಟಾಚಾರ ಮಾಡುತ್ತಿದೆ ಎಂಬುದನ್ನು ಸಾಬೀತುಪಡಿಸುತ್ತದೆ" ಎಂದರು.
ಇನ್ನು ಭ್ರಷ್ಟಾಚಾರದ ವಿಷಯಗಳ ಕುರಿತು ಮಾತನಾಡಿದ್ದಕ್ಕಾಗಿ ಸ್ಟಾಲಿನ್ ಅವರಿಗೆ ಪ್ರತಿಕ್ರಿಯಿಸಿದ ಅಮಿತ್ ಶಾ, 2 ಜಿ ತರಂಗಾಂತರ ಹಂಚಿಕೆ ಮಾಡಿದವರು ಯಾರು ಎಂದು ಎಐಎಡಿಎಂಕೆ ಪಕ್ಷದವರನ್ನು ಪ್ರಶ್ನಿಸಿ, ಈ ಪ್ರಕರಣಗಳಲ್ಲಿ ಒಳ ಹೊಕ್ಕು ನೋಡಿದರೆ, ಉತ್ತರ ತಿಳಿಯುತ್ತದೆ" ಎಂದು ಹೇಳಿದ್ದಾರೆ.