ಕನ್ಯಾಕುಮಾರಿ, ಮಾ.01 (DaijiworldNews/PY): ಮುಂದಿನ ವಿಧಾನಸಭಾ ಚುನಾವಣೆಗಾಗಿ ಭರ್ಜರಿ ತಯಾರಿ ನಡೆಸುತ್ತಿರುವ ರಾಹುಲ್ ಗಾಂಧಿ ತಮಿಳುನಾಡು ಕೇರಳ ರಾಜ್ಯಗಳಲ್ಲಿ ಸಭೆ ನಡೆಸಿ ಕಾಂಗ್ರೆಸ್ ಅಧಿಕಾರಕ್ಕೆ ತರುವ ಯತ್ನದಲ್ಲಿದ್ದಾರೆ.
ಈ ನಿಟ್ಟಿನಲ್ಲಿ ಕನ್ಯಾಕುಮಾರಿಗೆ ತೆರಳಿದ್ದ ಸಂದರ್ಭ ಓರ್ವ ಬಾಲಕ ಮಾಜಿ ಸಿಎಂ ಒ.ಕೆ ಕಾಮರಾಜ್ ಅವರ ಭಾವಚಿತ್ರವನ್ನು ಹಿಡಿದು ಬರೆಕಾಲಿನಲ್ಲಿ ನಿಂತಿರುವುದನ್ನು ರಾಹುಲ್ ಗಾಂಧಿ ಗಮನಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಕಾಮರಾಜ್ ಅವರ ನಿರ್ವಹಣಾ ಕಾರ್ಯಗಳ ಬಗ್ಗೆ ರಾಹುಲ್ ಗಾಂಧಿ ಅವರು ಮಾತನಾಡುತ್ತಿದ್ದರು. ರಾಹುಲ್ ಗಾಂಧಿ ಉಪಹಾರ ಗೃಹಕ್ಕೆ ಹೊರಡುತ್ತಿದ್ದ ಸಂದರ್ಭ ಬಾಲಕನ ಹೆಗಲ ಮೇಲೆ ಕೈ ಹಾಕಿ ಮಾತನಾಡುತ್ತಾ ಮುಂದೆ ಸಾಗಿದರು.
ರಾಹುಲ್ ಅವರು ಏನು ಮಾಡಬಹುದು ಎಂದು ಫೆಲಿಕ್ಸ್ ಅನ್ನು ವಿನಂತಿಸಿದರು. ಆತ ನಾನು 100 ಮೀಟರ್ ಓಟಗಾರ ಎಂದು ಉಲ್ಲೇಖಿಸಿದ್ದಾನೆ. ಈ ವೇಳೆ ರಾಹುಲ್ ಬಾಲಕನೊಂದಿಗೆ ನೀನು ನನಗಿಂತ ವೇಗವಾಗಿ ಓಡುತ್ತೀಯಾ ಎಂದು ಕೇಳಿದರು. ಅದಕ್ಕೆ ಬಾಲಕ ಆಗಬಹುದು ಎಂದು ಹೇಳಿದ್ದಾನೆ.
ರಾಹುಲ್ ಗಾಂಧಿ ಇಂಗ್ಲಿಷ್ನಲ್ಲಿ ಮಾತನಾಡುತ್ತಿದ್ದಂತೆ, ಬಾಲಕ ತಮಿಳು ಭಾಷೆಯಲ್ಲಿ ಉತ್ತರಿಸಿದ್ದಾನೆ. "ಆತ ಊಟ ಮಾಡಿದ್ದಾನೆಯೇ?. ಆತ ಬರೆಗಾಲಿನಲ್ಲಿ ಹೇಗೆ ನಡೆಯುತ್ತಾನೆ. ಹೇಗೆ ಕೆಲಸ ಮಾಡುತ್ತಾನೆ. ಆತ ದಿನದಲ್ಲಿ ಎಷ್ಟು ಸಮಯದವರೆಗೆ ಅಭ್ಯಾಸ ಮಾಡುತ್ತಾನೆ" ಎಂದು ಕೇಳಿದ್ದಾರೆ.
ರಾಹುಲ್ ಗಾಂಧಿ ಬಾಲಕನಿಗೆ, ಉತ್ತಮವಾದ ಆಹಾರವನ್ನು ಸೇವಿಸಲು ತಿಳಿಸಿದರು. ಆತನಿಗೆ ಶೂಗಳನ್ನು ನೀಡುವುದಾಗಿ ಭರವಸೆ ನೀಡಿದರು. ಅಲ್ಲದೇ, ಬಾಲಕನನ್ನು ತರಬೇತಿ ಅಕಾಡೆಮಿಗೆ ದಾಖಲಿಸುವುದಾಗಿ ಭರವಸೆ ನೀಡಿದ್ದಾರೆ.
ನಂತರ ರಾಹುಲ್ ಗಾಂಧಿ ಬಾಲಕನಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ದೊರೆತ ಪ್ರಶಸ್ತಿಗಳನ್ನು ವೀಕ್ಷಿಸಿದರು. ರೋಡ್ ಶೋ ಗೆ ಹೋಗುವ ಮುನ್ನ ರಾಹುಲ್ ಗಾಂಧಿ ಅವರು ಬಾಲಕನ ಮನೆಗೆ ತೆರಳಿ ಮಾತುಕತೆ ನಡೆಸಿದರು.