ಬೆಂಗಳೂರು, ಮಾ. 01(DaijiworldNews/HR): ಬಿಗ್ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಸಿಕ್ಕರೆ ನಾನು ಸ್ಪರ್ಧಿಯಾಗಲು ರೆಡೆ ಎಂದು ಮಾಜಿ ಸಚಿವ, ಎಂಎಲ್ಸಿ ಹೆಚ್.ವಿಶ್ವನಾಥ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ನನಗೆ ಬಿಗ್ಬಾಸ್ ಮನೆಗೆ ಹೋಗಲು ಆಸಕ್ತಿಇದೆ. ನನ್ನ ಸ್ನೇಹಿತರು, ಆಪ್ತರು ಹಾಗೂ ಅಭಿಮಾನಿಗಳು ಬಿಗ್ಬಾಸ್ ಮನೆಗೆ ಹೋಗಲು ಒತ್ತಾಯಿಸುತ್ತಿದ್ದು, ಬಿಗ್ಬಾಸ್ ಕಾರ್ಯಕ್ರಮದ ಆಯೋಜಕರಿಂದ ವಿಶೇಷ ಆಹ್ವಾನಿತರಾಗಿ ಬನ್ನಿ ಎಂದು ಕರೆದರೆ ನಾಲ್ಕೈದು ದಿನಗಳ ಮಟ್ಟಿಗೆ ಬಿಗ್ಬಾಸ್ ಮನೆಗೆ ಗೆಸ್ಟ್ ರೀತಿ ಹೋಗಿ ಬರುತ್ತೇನೆ" ಎಂದರು.
ಇನ್ನು ಸೀಸನ್ 6ರ ವೇಳೆಗೆ ಪರಮೇಶ್ವರ್ ಗುಂಡ್ಕಲ್ ಅವರನ್ನು ನನ್ನನ್ನು ಬಿಗ್ಬಾಸ್ಗೆ ಆಹ್ವಾನಿಸಿದ್ದರು. ಆದರೆ ಆಗ ಅನಾರೋಗ್ಯದ ಕಾರಣದಿಂದ ನನಗೆ ಹೋಗಲು ಆಗಲಿಲ್ಲ. ಬಿಗ್ಬಾಸ್ ಮನೆಗೆ ಹೋದರೆ ರಾಜಕಾರಣದ ಕುರಿತು ಜನರಿಗೆ ಶಿಕ್ಷಣ ಕೊಡುತ್ತೇನೆ. ಅವಕಾಶ ಸಿಕ್ಕಿದರೆ ಖಂಡಿತವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿದ್ದ" ಎಂದು ಹೇಳಿದ್ದಾರೆ.