ತಿರುಪತಿ, ಮಾ 01 (DaijiworldNews/MS): ತಿರುಪತಿ ವಿಮಾನ ನಿಲ್ದಾಣದಲ್ಲಿ ನೆಲದ ಮೇಲೆಯೇ ಕುಳಿತು ಧರಣಿಗೆ ಮುಂದಾದ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರನ್ನು ರೇಣಿಗುಂಟಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಂದ್ರಬಾಬು ನಾಯ್ಡು ಅವರು ಚುನಾವಣಾ ಪ್ರಚಾರ ನಡೆಸಲು ಚಿತ್ತೂರಿಗೆ ತೆರಳಲೆಂದು ರೇಣಿಗುಂಟಾದಲ್ಲಿರುವ ತಿರುಪತಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.
ಮುಂಬರುವ ಸ್ಥಳೀಯ ಪಾಲಿಕೆ ಚುನಾವಣೆಗೆ ಟಿಡಿಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದ್ದೂ ಆದರೆ ಆಡಳಿತಾರೂಢ YSR ಕಾಂಗ್ರೆಸ್ ತನ್ನ ಅಭ್ಯರ್ಥಿಗಳಿಗೆ ನಾಮಪತ್ರ ಹಿಂತೆಗೆದುಕೊಳ್ಳುವಂತೆ ಬಲವಂತವಾಗಿ ಒತ್ತಡ ಹೇರುತ್ತಿದೆ ಎಂದು ಚಂದ್ರಬಾವಬು ನಾಯ್ಡು ಆರೋಪಿಸಿದ್ದರು. ಮಾತ್ರವಲ್ಲದೆ ಇವರು ಚಿತ್ತೂರಿನಲ್ಲಿ ಚುನಾವಣಾ ಪ್ರಚಾರ ನಡೆಸಲು ತೆರಳಬೇಕಾಗಿತ್ತು. ಆದರೆ ಚಿತ್ತೂರಿನಲ್ಲಿ ಪ್ರಚಾರ ನಡೆಸಲು ಚುನಾವಣಾ ಆಯೋಗ ನೀಡಿದ ಅನುಮತಿಯಲ್ಲಿ ಕೆಲ ವ್ಯತ್ಯಾಸ ಕಂಡುಬಂದಿತ್ತು.. ಹೀಗಾಗಿ ಅವರು ಚಿತ್ತೂರಿನಲ್ಲಿ ಧರಣಿ ನಡೆಸಲು ಅವರು ತೀರ್ಮಾನಿಸಿದ್ದರು. ಆದರೆ ಪೊಲೀಸಲು ಚಿತ್ತೂರಿಗೆ ಪ್ರಚಾರಕ್ಕೆ ತೆರಳದಂತೆ ಅವರಿಗೆ ಅವಕಾಶ ನೀಡದ ಕಾರಣ ವಿಮಾನ ನಿಲ್ದಾಣದ ನೆಲದಲ್ಲಿಯೇ ಕೆಲ ಕಾಲ ಕುಳಿತು ಪ್ರತಿಭಟನೆ ನಡೆಸಿದರು.
ನಾಯ್ಡು ಅವರು ಸೋಮವಾರ ಬೆಳಿಗ್ಗೆ 9.35 ರ ಸುಮಾರಿಗೆ ಹೈದರಾಬಾದ್ನಿಂದ ಬಂದಿಳಿದಿದ್ದು ಅ ವರು ಹೊರಗೆ ಬರುತ್ತಿದ್ದಂತೆ, ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಮತ್ತು ಕೋವಿಡ್ -19 ನಿರ್ಬಂಧಗಳ ಅಡಿಯಲ್ಲಿ ್ ಪೊಲೀಸರು ಅವರನ್ನು ವಶಕ್ಕೆ ಪಡೆದರು. ಇದೇ ವೇಳೆ ಅವರನ್ನು ಸ್ವಾಗತಿಸಲು ಬಂದ ಕಾರ್ಯಕರ್ತರ ಹಾಗೂ ಪೊಲೀಸರ ನಡುವೆ ಘರ್ಷಣೆ ನಡೆದು ಕೆಲಕಾಲ ಉದ್ವೀಗ್ನ ಪರಿಸ್ಥಿತಿ ಉಂಟಾಗಿತ್ತು.
ಸುಮಾರು ಮುಕ್ಕಾಲು ಗಂಟೆಗಳ ವಾಗ್ವಾದದ ನಂತರ, ಪೊಲೀಸರ ವಿನಂತಿಗೆ ಸಮ್ಮತಿಸಿ ತಮ್ಮ ನಿಲುವನ್ನು ಸಡಿಲಿಸಿದ ಚಂದ್ರಬಾಬು ನಾಯ್ಡು ಚಿತ್ತೂರಿಗೆ ತೆರಳದೇ ವಾಪಾಸಾಗಿದ್ದಾರೆ.