ಅಹಮದಾಬಾದ್, ಮಾ. 01(DaijiworldNews/HR): ರಾಜಸ್ಥಾನದ ಜಲೋರ್ ಜಿಲ್ಲೆಯಲ್ಲಿ 23 ವರ್ಷದ ಯುವತಿಯೊಬ್ಬಳು ವಿಡಿಯೋ ಮಾಡಿ ಬಳಿಕ ಸಬರಮತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಆಯಿಷಾ ಆರಿಫ್ ಖಾನ್(23) ಎಂದು ಗುರುತಿಸಲಾಗಿದೆ.
ಮುಖದ ಮೇಲೆ ದೊಡ್ಡ ನಗುವಿನೊಂದಿಗೆ ತನ್ನನ್ನು ಪರಿಚಯಿಸಿಕೊಳ್ಳುವ ಮೂಲಕ ಆಯಿಷಾ ವೀಡಿಯೊವನ್ನು ಪ್ರಾರಂಭಿಸಿದ್ದು, ನಾನು ಈಗ ತೆಗೆದುಕೊಳ್ಳುತ್ತಿರುವ ನಿರ್ಧಾರಕ್ಕೆ ಯಾರನ್ನೂ ಹೊಣೆಗಾರರನ್ನಾಗಿ ಮಾಡಬಾರದು ಎಂದು ಹೇಳಿದ್ದು, ಬಳಿಕ ವೀಡಿಯೊ ಮುಂದುವರೆದಂತೆ ಅವಳ ಧ್ವನಿಯಲ್ಲಿ ದುಖಃ ಸ್ಪಷ್ಟವಾಗುತ್ತದೆ ಕಾಣುತ್ತದೆ.
ಆಯಿಷಾಗೆ 2018 ರಲ್ಲಿ ಆರಿಫ್ ಎಂಬಾತನೊಂದಿಗೆ ವಿವಾಹವಾಗಿದ್ದು, ವರದಕ್ಷಿಣೆಗಾಗಿ ಆರಿಫ್ ಕಿರುಕುಳ ನೀಡುತ್ತಿದ್ದು, ಈ ಸಂಬಂಧ ಆಕೆಯ ತಂದೆ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದಾರೆ.
ಇನ್ನು ಸಾಯುವ ಮುನ್ನ ವಿಡಿಯೋದ ಮೂಲಕ ತನ್ನ ಪತಿಗೆ ಸಂದೇಶ ನೀಡಿರುವ ಆಕೆ, "ನಮಗೆ ಇದು ದೇವರು ಕೊಟ್ಟಿರುವ ಜೀವನ ಅದನ್ನು ನೀವು ಅರ್ಥಮಾಡಿಕೊಳ್ಳಿ. ನಾನು ಸಂತೋಷವಾಗಿದ್ದೇನೆ, ನಾನು ಇಂದಿಗೆ ಜೀವವನ್ನು ನಿಲ್ಲಿಸಲು ಬಯಸುತ್ತೇನೆ. ಇಂತಹ ಮನುಷ್ಯರ ಕ್ರೂರ ವರ್ತನೆಯನ್ನು ಮತ್ತೆ ಯಾರೂ ತೋರಿಸಬಾರದೆಂದು ಅಲ್ಹಾನಲ್ಲಿ ಬೇಡಿಕೊಳ್ಳುತ್ತೇನೆ. ಇನ್ನು ನನ್ನ ಅಪ್ಪಾ, ನಮ್ಮ ಪ್ರೀತಿಪಾತ್ರರೊಡನೆ ಎಷ್ಟು ದಿನ ಹೋರಾಡಲು ಸಾಧ್ಯ? ಹಾಗಾಗಿ ನಾನು ಈಗ ಅಲ್ಹಾನನ್ನು ಭೇಟಿಯಾಗುತ್ತೇನೆ ಎಂದು ಹೇಳಿ ಸಬರಮತಿ ನದಿಗೆ ಹಾರಿದ್ದಾರೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ - 9152987821