ಕೊಚ್ಚಿ, ಮಾ.01 (DaijiworldNews/PY): ಕೇರಳ ಹೈಕೋರ್ಟ್ನ ಇಬ್ಬರು ಮಾಜಿ ನ್ಯಾಯಮೂರ್ತಿಗಳು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ನಿವೃತ್ತ ನ್ಯಾಯಮೂರ್ತಿ ಪಿ.ಎನ್.ರವೀಂದ್ರನ್ ಹಾಗೂ ವಿ.ಚಿತಂಬರೇಶ್ ಅವರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ರವೀಂದ್ರನ್ ಅವರು 2007ರಿಂದ 2018ರವರೆಗೆ ಕೇರಳ ಹೈಕೋರ್ಟ್ನ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದು, ಚಿತಂಬರೇಶ್ ಅವರು 2011-2019ರವರೆಗೆ ಹೈಕೋರ್ಟ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು.
ಕಳೆದ ತಿಂಗಳು, ಕೇರಳ ಹೈಕೋರ್ಟ್ನ ಇನ್ನೋರ್ವ ಮಾಜಿ ನ್ಯಾಯಾಧೀಶ ಬಿ. ಕೆಮಲ್ ಪಾಷಾ ಅವರು ಕೇರಳ ರಾಜಕೀಯ ಪ್ರವೇಶಿಸಲು ಆಸಕ್ತಿ ತೋರಿದ್ದರು. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅವರಿಗೆ ಎರ್ನಾಕುಲಂ ಜಿಲ್ಲೆಯಲ್ಲಿ ಸ್ಥಾನ ನೀಡಿದರೆ, ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದ್ದರು.
ಪಾಷಾ ಅವರು 2103 ಹಾಗೂ 2018ರ ನಡುವೆ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು.