ಮುಂಬೈ, ಮಾ. 01(DaijiworldNews/HR): ಬಜಾಜ್ ಆಟೊ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬಜಾಜ್ ಅವರು ಚೀನಾದೊಂದಿಗೆ ವ್ಯಾಪಾರ ಮುಂದುವರಿಸುವ ಒಲವು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಈ ಕುರಿತು ಏಷ್ಯಾ ಆರ್ಥಿಕ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ನಾವು ಜಗತ್ತಿನಾದ್ಯಂತ ಅನೇಕ ವಿತರಕರು ಮತ್ತು ಪೂರೈಕೆದಾರರನ್ನು ಹೊಂದಿದ್ದು, ನಾವು ಚೀನಾದೊಂದಿಗೆ ವ್ಯಾಪಾರ ಮುಂದುವರಿಸಿದರೆ ಉತ್ತಮ. ಚೀನಾದಂತಹ ದೊಡ್ಡ ದೇಶ, ದೊಡ್ಡ ಮಾರುಕಟ್ಟೆಯನ್ನು ಬಿಟ್ಟು ವ್ಯಾಪಾರ ನಡೆಸಿದರೆ, ಮುಂಬರುವ ದಿನಗಳಲ್ಲಿ ನಾವು ನಮ್ಮ ವ್ಯಾಪಾರದಲ್ಲಿ ಪರಿಪೂರ್ಣ ಎನಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ" ಎಂದಿದ್ದಾರೆ.
ಇನ್ನು "ಇದಕ್ಕೆ ಕಾರಣಗಳು ಏನೇ ಇರಲಿ, ಜೂನ್-ಜುಲೈ ವೇಳೆಗೆ ಸರಕುಗಳನ್ನು ಆಮದು ಮಾಡಿಕೊಳ್ಳಲು ನಿರ್ಬಂಧ ಹೇರಲಾಯಿತು. ಅದರಲ್ಲಿಯೂ ಮುಖ್ಯವಾಗಿ ಚೀನಾದಿಂದ ಆಮದು ಮಾಡಿಕೊಳ್ಳಲು ನಿರ್ಬಂಧಿಸಲಾಗಿತ್ತು. ಆದರೆ ಭಾರತೀಯ ಅಥವಾ ವಿದೇಶಿ ಮಾರುಕಟ್ಟೆಗೆ ಪೂರೈಸಬೇಕಿರುವ ಉತ್ಪನ್ನಗಳ ತಯಾರಿಕೆಗೆ ದೇಶದಲ್ಲಿ ತಯಾರಾಗದೇ ಇರುವ ಬಿಡಿಭಾಗಗಳನ್ನು ಇದ್ದಕ್ಕಿದಂತೆಯೇ ಸಂಗ್ರಹಿಸಲು ಹೇಗೆ ಸಾಧ್ಯ?" ಎಂದು ಪ್ರಶ್ನಿಸಿದ್ದಾರೆ.