ಬೆಂಗಳೂರು, ಮಾ.01 (DaijiworldNews/PY): ಗ್ಯಾಸ್ ಸಿಲಿಂಡರ್ ಬೆಲೆ ಮತ್ತೆ ಏರಿಕೆಯಾಗಿದ್ದು, 25 ರೂ. ಹೆಚ್ಚಳವಾಗಿದೆ. ಈ ಹಿಂದೆ 797 ರೂ. ಇದ್ದ ಬೆಲೆ ಇದೀಗ 822 ರೂ. ಗೆ ಏರಿಕೆಯಾಗಿದೆ.
ಸಾಂದರ್ಭಿಕ ಚಿತ್ರ
ಕಮರ್ಷಿಯಲ್ ಸಿಲಿಂಡರ್ ದರ ಕೂಡಾ 96 ರೂ.ಗೆ ಏರಿಕೆಯಾಗಿದ್ದು, ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ದರ 1,666 ರೂ. ಆಗಿದೆ. ಈ ಹಿನ್ನೆಲೆ ಹೊಟೇಲ್ ಉದ್ಯಮಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅಡುಗೆ ಅನಿಲ ಹಾಗೂ ಕಮರ್ಷಿಯಲ್ ಸಿಲಿಂಡರ್ ಎರಡರ ದರವೂ ಹೆಚ್ಚಳವಾಗಿದೆ. ಈ ಹಿಂದೆ ಕಮರ್ಷಿಯಲ್ ಸಿಲಿಂಡರ್ ಬೆಲೆ 1,570 ಇತ್ತು, ಇದೀಗ 1,666 ರೂ. ಆಗಿದೆ.
ಫೆಬ್ರವರಿ ತಿಂಗಳಿನಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ 100 ರೂ.ಗೆ ಏರಿಕೆಯಾಗಿತ್ತು. ಫೆ.4ರಂದು 25 ರೂ ಹಾಗೂ ಫೆ.14ರಂದು 50 ರೂ. ಏರಿಕೆ ಕಂಡಿತ್ತು. ಬಳಿಕ ಫೆ.25ರಂದು 25 ರೂ. ಹೆಚ್ಚಾಗಿತ್ತು.
ದೆಹಲಿಯಲ್ಲಿ ದೇಶೀಯ ಅನಿಲ ಬೆಲೆಯು 794-819 ರೂ. ಏರಿಕೆಯಾಗಿದೆ. ಮುಂಬೈಯಲ್ಲಿ 819 ರೂ., ಕೋಲ್ಕತ್ತಾದಲ್ಲಿ 845.50 ರೂ ಹಾಗೂ ಚೆನ್ನೈನಲ್ಲಿ 835 ರೂ. ಏರಿಕೆಯಾಗಿದೆ.
ಜನವರಿ ತಿಂಗಳಿನಲ್ಲಿ ಎಲ್ಪಿಜಿ ಬೆಲೆ ಹೆಚ್ಚಳದಲ್ಲಿ ತೈಲ ಮಾರುಕಟ್ಟೆ ಕಂಪೆನಿಗಳು ಬದಲಾವಣೆಯನ್ನು ಮಾಡಿಲ್ಲ. ಇದಕ್ಕೂ ಮುನ್ನ ಡಿಸೆಂಬರ್ ತಿಂಗಳಿನಲ್ಲಿ ಎರಡು ಬಾರಿ ಏರಿಕೆ ಕಂಡಿದ್ದು, ಫೆಬ್ರವರಿಯಲ್ಲಿ ಮೂರು ಬಾರಿ ಏರಿಕೆ ಕಂಡಿದೆ. ಈಗ ಮಾರ್ಚ್ ತಿಂಗಳ ಮೊದಲ ದಿನ ದರ ಹೆಚ್ಚಳವಾಗಿದೆ.