ನವದೆಹಲಿ, ಮಾ.01 (DaijiworldNews/PY): ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ಕಾರ್ಯವೈಖರಿಯನ್ನು ಕಾಂಗ್ರೆಸ್ನ ಹಿರಿಯ ನಾಯಕರಾದ ಗುಲಾಂ ನಬಿ ಆಜಾದ್ ಹಾಗೂ ರಷೀದ್ ಆಳ್ವಿ ಅವರು ಹೊಗಳಿದ್ದಾರೆ.
ಜಮ್ಮುವಿನಲ್ಲಿ ಮಾತನಾಡಿದ ಗುಲಾಂ ನಬಿ ಆಜಾದ್ ಅವರು, "ನಾನು ಹಳ್ಳಿಯಿಂದ ಬಂದವನು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆಯಾಗುತ್ತಿದೆ. ಈ ರೀತಿಯಾಗಿ ತಮ್ಮ ಹಿನ್ನೆಲೆಯ ಬಗ್ಗೆ ಪ್ರಾಮಾಣಿಕವಾಗಿ ಹೇಳಿಕೊಳ್ಳುವ ನಾಯಕರೆಂದರೆ ನನಗೆ ಇಷ್ಟ. ನರೇಂದ್ರ ಮೋದಿ ಅವರು ಸಹ ಹಳ್ಳಿಯ ಹಿನ್ನೆಯವರಾಗಿದ್ದಾರೆ. ಅವರು ಚಹಾ ಮಾರುತ್ತಿದ್ದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ" ಎಂದು ಹೊಗಳಿದ್ದಾರೆ.
ಬಿಜೆಪಿಯ ಕಾರ್ಯವೈಖರಿಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಕಾಂಗ್ರೆಸ್ನ ಮತ್ತೋರ್ವ ನಾಯಕ ರಷೀದ್ ಆಳ್ವಿ ಅವರು, "ಪ್ರತಿಯೊಂದು ಚುನಾವಣೆಯನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸುತ್ತದೆ. ಅಲ್ಲದೇ, ಬಿಜೆಪಿಯ ನಾಯಕತ್ವವನ್ನು ಕೂಡಾ ಮೆಚ್ಚಬೇಕು. ಕೇವಲ ನಾಯಕರು ಮಾತ್ರ ಅಲ್ಲ, ಪಕ್ಷದ ಎಲ್ಲರೂ ಕೂಡಾ ಕೆಲಸ ಮಾಡುತ್ತಾರೆ. ಅವರ ಕಾರ್ಯವೈಖರಿಯನ್ನು ನೋಡಿ ನಾವು ಕಲಿಯಬೇಕಿದೆ" ಎಂದು ತಿಳಿಸಿದ್ದಾರೆ.