ಬೆಂಗಳೂರು, ಮಾ 01 (DaijiworldNews/MS): ಭಾರತೀಯ ಜನತಾ ಪಾರ್ಟಿಯು ಕಾಂಗ್ರೆಸ್ ಶಾಸಕರನ್ನಷ್ಟೇ ಅಲ್ಲದೇ, ಕಾಂಗ್ರೆಸ್ಸಿನ ಇತಿಹಾಸ ಪುರುಷರನ್ನೂ ಸಹ "ಆಪರೇಷನ್ ಕಮಲ" ಮಾಡಿದೆ ಎಂದು ರಾಜ್ಯ ಕಾಂಗ್ರೆಸ್ ವ್ಯಂಗ್ಯವಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ "ಬಿಜೆಪಿಯೂ ಪಕ್ಷದ ನಾಯಕರಾದ ಸಾವರ್ಕರ್, ಗೋಲ್ವಾಲ್ಕರ್, ವಾಜಪೇಯಿಯವರನ್ನು ಮರೆತು ಬಿಟ್ಟು , ಕಾಂಗ್ರೆಸ್ ನಾಯಕ ದಿವಂಗತ ಕುಮಾರಸ್ವಾಮಿ ಕಾಮರಾಜ್ ತಮಿಳುನಾಡಿನ ಮೂರನೇ ಮುಖ್ಯಮಂತ್ರಿ ಅವರನ್ನು ಆಪರೇಷನ್ ಕಮಲ" ಮಾಡಿದೆ ಎಂದು ಟೀಕಿಸಿದೆ.
ಇತ್ತೀಚೆಗೆ ಬಿಜೆಪಿ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ಪ್ರಚಾರ ಮೆರವಣಿಗೆಯಲ್ಲಿ ಎಂಜಿಆರ್, ಕಾಂಗ್ರೆಸ್ ನಾಯಕ ಕೆ ಕಾಮರಾಜನ್ ಹಾಗೂ ನರೇಂದ್ರ ಮೋದಿಯವರ ಕಟ್ ಔಟ್ ಅನ್ನು ಒಟ್ಟಿಗೆ ಹಾಕಿರುವುದನ್ನುಈ ರೀತಿಯಾಗಿ ಕಾಂಗ್ರೆಸ್ ಖಂಡಿಸಿದ್ದು, ಬಿಜೆಪಿಯೂ ಈ ಹಿಂದೆ "ಸರ್ದಾರ್ ಪಟೇಲ್, ಸುಭಾಶ್ಚಂದ್ರ ಬೋಸ್, ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ತಮ್ಮ ಪಕ್ಷದ ನಾಯಕರಂತೆ ಬಿಂಬಿಸಿಕೊಂಡಿದ್ದು ಇದೀಗ ಕುಮಾರಸ್ವಾಮಿ ಕಾಮರಾಜ್ ಅವರನ್ನು ಬಿಟ್ಟಿಲ್ಲ ಎಂದು ವ್ಯಂಗ್ಯವಾಡಿದೆ.
ಬಿಜೆಪಿಯೂ ಸಾವರ್ಕರ್, ಗೋಲ್ವಾಲ್ಕರ್, ವಾಜಪೇಯಿಯವರನ್ನ ಮರೆತು ಕಾಂಗ್ರೆಸ್ ನಾಯಕ ಕಾಮರಾಜ್ರನ್ನ ಆಶ್ರಯಿಸಿದ್ದು ನಾಚಿಕೆಗೇಡಲ್ಲವೇ, ಬಿಜೆಪಿಗೂ ಗೊತ್ತಿದೆ ದೇಶ ಕಟ್ಟುವಲ್ಲಿ ತಮ್ಮವರ ಕೊಡುಗೆ ಶೂನ್ಯವೆಂದು, ಹೀಗಾಗಿ ಚುನಾವಣೆಯಲ್ಲಿ ಜನರ ಮುಂದೆ ತಮ್ಮ ಸಾವರ್ಕರ್, ಗೋಲ್ವಾಲ್ಕರ್, ಹೆಗಡೆವಾರ್ ಫೋಟೋಗಳನ್ನ ಹಿಡಿದು ಹೋಗುವುದಿಲ್ಲ. ಅದಕ್ಕಾಗಿ ಬಿಜೆಪಿ ಆಶ್ರಯಿಸುವುದೇ ಕಾಂಗ್ರೆಸ್ಸಿನ ನಾಯಕರನ್ನ. ಇತಿಹಾಸವೇ ಇಲ್ಲದ ಪಕ್ಷಕ್ಕೆ ಹೇಳಿಕೊಳ್ಳಲು ಸಾಧನೆಗಳು ಮತ್ತು ನಾಯಕರ ಬರವಿದೆ! ಎಂದು ಟೀಕಿಸಿದೆ