ನವದೆಹಲಿ, ಮಾ 01 (DaijiworldNews/MS): ಕೊರೊನಾ ಲಸಿಕೆ ಎರಡನೆ ಹಂತದ ಅಭಿಯಾನ ಮಾ.1 ರ ಇಂದು ಆರಂಭವಾಗಿದ್ದು, ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಪ್ರದಾನಿ ನರೇಂದ್ರ ಮೋದಿ ಲಸಿಕೆ ಪಡೆದಿದ್ದಾರೆ.
ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಪ್ರಧಾನಿ ಮೋದಿ " ಏಮ್ಸ್ ಆಸ್ಪತ್ರೆಯಲ್ಲಿ ನಾನು ಮೊದಲ ಬಾರಿಗೆ ಕೋವಿಡ್-19 ಲಸಿಕೆಯನ್ನು ಹಾಕಿಸಿಕೊಂಡಿದ್ದು, ಲಸಿಕೆಗೆ ಅರ್ಹರಾದ ಎಲ್ಲರೂ ಲಸಿಕೆ ಪಡೆದು ಭಾರತವನ್ನು ಕೋವಿಡ್ ಮುಕ್ತವನ್ನಾಗಿಸಿ" ಎಂದಿದ್ದಾರೆ.
ಪುದುಚೇರಿ ಮೂಲದ ಸಿಸ್ಟರ್ ಪಿ.ನಿವೇದಾ ಪ್ರಧಾನಿಗೆ ದೇಶಿಯ ಲಸಿಕೆ ಆಗಿರುವ ಭಾರತ್ ಬಯೋಟೆಕ್ನ 'ಕೊವ್ಯಾಕ್ಸಿನ್' ಲಸಿಕೆ ಹಾಕಿದ್ದಾರೆ.
60 ವರ್ಷ ಮೇಲ್ಪಟ್ಟವರು ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟ ಕಾಯಿಲೆ ಪೀಡಿತರು ಪಡೆಯಬಹುದು. ಲಸಿಕೆ ಪಡೆಯುವ ಕೇಂದ್ರದಲ್ಲಿ ಆಯಾ ದಿನದ ಅಪಾಯಿಮೆಂಟ್ ಅವಕಾಶವಿದ್ದು ಇದು ಅದೇ ದಿನ ಮದ್ಯಾಹ್ನ 3 ಗಂಟೆಗೆ ಅಂತ್ಯವಾಗಲಿದೆ. ಇಂದು ಮಾತ್ರ ಯಾವುದೇ ಭವಿಷ್ಯದ ದಿನಾಂಕಗಾಗಿ ಅಪಾಯಿಮೆಂಟ್ ಪಡೆಯಬಹುದಾಗಿದೆ.
ನೋಂದಣಿಗಾಗಿ ಕೊ-ವಿನ್ 2.0 ಪೋರ್ಟಲ್ ಮಾ.1ರ ಬೆಳಗ್ಗೆ 9ರಿಂದ ತೆರೆದುಕೊಳ್ಳಲಿದೆ.